ದೇವರ ಆಶೀರ್ವಾದ ಕ್ಷೇತ್ರದ ಮೇಲಿರಲಿದೆ: ಭಗವಂತ ನಮ್ಮೊಂದಿಗೆ ಇದ್ದಾರೆ: ಡಾ.ಹೆಗ್ಗಡೆ

0

ಧರ್ಮಸ್ಥಳ: ದೇವರ ಆಶೀರ್ವಾದ ಕ್ಷೇತ್ರದ ಮೇಲಿರಲಿದೆ. ಆ ಭಗವಂತ ನಮ್ಮೊಂದಿಗೆ ಇದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿರುವ ಆರೋಪದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಬೆಳ್ತಂಗಡಿ ಕೋರ್ಟ್ ದೂರುದಾರನನ್ನು ಹತ್ತು ದಿನಗಳ ಎಸ್.ಐ.ಟಿ ತನಿಖೆಗೆ ನೀಡಿದ್ದಾರೆ.

ಎಸ್‌.ಐ.ಟಿ ತನಿಖೆ ನಡೆಯುತ್ತಿರುವ ಕಾರಣ ಹೆಚ್ಚು ಮಾತನಾಡುವುದಿಲ್ಲ. ಒಂದೊಂದೇ ಸತ್ಯ ಹೊರಬರುತ್ತಿದೆ. ಸಂತಸವಾಗಿದೆ ಎಂದು ಹೇಳಿದ್ದಾರೆ.

ಈಗ ಎಲ್ಲಾ ಆರೋಪಗಳಿಂದ ತೊಳೆದಂತಾಗಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ. ದೇವರ ಆಶೀರ್ವಾದ ಈ ಕ್ಷೇತ್ರದ ಮೇಲಿರಲಿದೆ. ಆ ಭಗವಂತ ನಮ್ಮೊಂದಿಗೆ ಇದ್ದಾರೆ ಎಂದು ಹೆಗ್ಗಡೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here