
ಕೊಕ್ಕಡ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲಾ ವಿಶ್ವವಿದ್ಯಾಲಯದಿಂದ ನಡೆಸಲ್ಪಟ್ಟ ಕರ್ನಾಟಕ ಸಂಗೀತ ಜೂನಿಯರ್ ಗ್ರೇಡ್ ವಿಭಾಗದಲ್ಲಿ ಕೊಕ್ಕಡದ ಸರಸ್ವತಿ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಾದ ಚಿರಂತನ ಹಾಗೂ ಹೃದ್ಯ ಟಿ. ಜಿ. ಡಿಸ್ಟಿಂಕ್ಷನ್ ಗ್ರೇಡ್ ನಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಳೆದ ಮೇ ತಿಂಗಳಿನಲ್ಲಿ ಪರೀಕ್ಷೆ ನಡೆದಿದ್ದು ಆ. 21ರಂದು ಫಲಿತಾಂಶ ಪ್ರಕಟವಾಗಿದೆ. ಇವರಿಬ್ಬರೂ ಕೊಕ್ಕಡದಲ್ಲಿ ಕಳೆದ 35 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸರಸ್ವತಿ ಸಂಗೀತ ಕಲಾ ಶಾಲೆಯ ಶಿಕ್ಷಕಿ ವಿದುಷಿ ಪದ್ಮಾವತಿ ವೆಂಕಟೇಶ ಬಾಳ್ತಿಲ್ಲಾಯರ ಶಿಷ್ಯೆಯರಾಗಿದ್ದಾರೆ. ಚಿರಂತನ ಕಲ್ಲಪಣೆ ನಿವಾಸಿ ಕೆ.ಗುರುಪ್ರಸಾದ್ ಹಾಗೂ ಕೆ. ಜಯಶ್ರೀ ದಂಪತಿಯ ಪುತ್ರಿಯಾಗಿದ್ದು, ಹೃದ್ಯ ಟಿ. ಜಿ. ಕೊಕ್ಕಡದ ಹಿರಿಯ ವೈದ್ಯ ಡಾ. ಮೋಹನ್ ದಾಸ್ ಗೌಡ ರವರ ಮೊಮ್ಮಗಳಾಗಿದ್ದು, ಪಂಚಮಿ ಹಿತಾಯುರ್ಧಾಮದ ವೈದ್ಯೆ ಡಾ. ತಾರಾ ಗಣೇಶ್ ಹಾಗೂ ಡಾ. ಗಣೇಶ್ ಪ್ರಸಾದ್ ದಂಪತಿಗಳ ಪುತ್ರಿ.