
ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಮತ್ತು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಬಾಲಕ-ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯಾಟ ಆ.23 ರಂದು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರಿಡೀಮರ್ ಶಿಕ್ಷಣ ಸಂಸ್ಥೆಗಳು ಸಂಚಾಲಕರಾದ ಅತೀ ವಂ. ವೊಲ್ಟರ್ ಓಸ್ವಲ್ಡ್ ಡಿಮೆಲ್ಲೊ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಆಡಳಿತಾಧಿಕಾರಿ ನೆಲ್ಸನ್ ಧೀರಜ್ ಪಾಯ್ಸ್, ಬೆಳ್ತಂಗಡಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಬೆಳ್ತಂಗಡಿ ಶಿಕ್ಷಣ ಸಂಯೋಜಕರು ಚೇತನಾಕ್ಷಿ, ಬೆಳ್ತಂಗಡಿ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜ, ಬೆಳ್ತಂಗಡಿ ಚರ್ಚ್ ಪಾವನಾ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಬೆಳ್ತಂಗಡಿ ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಬೆಳ್ತಂಗಡಿ ಚರ್ಚ್ ಆಯೋಗಗಳ ಸಂಯೋಜಕಿ ಪೌಲಿನ್ ರೇಗೊ, ಬೆಳ್ತಂಗಡಿ ಹೋಲಿ ರಿಡೀಮಲ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ರಿಚರ್ಡ್ ಸಿಕ್ಟೇರಾ, ಬೆಳ್ತಂಗಡಿ ಹೋಲಿ ರಿಡೀಮರ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರೆನ್ನಿ ಅಗತ ವಾಸ್, ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯ ಮುಖ್ಯೋಪಾಧ್ಯಾಯ ಕ್ಲಿಪಡ್ ಸೈಮನ್ ಪಿಂಟೋ ಉಪಸ್ಥಿತರಿದ್ದರು.
ಶಿಕ್ಷಕ ಪ್ರಭಾ ಸ್ವಾಗತಿಸಿ, ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯ ದೈಹಿಕ ಶಿಕ್ಷಕ ಸಂದೀಪ್ ಧನ್ಯವಾದವಿತ್ತರು.