ಮಳೆ ರಜೆಯಿಂದಾಗಿ ಉಂಟಾದ ಪಠ್ಯ ಅವಧಿಯ ತೊಂದರೆ ನಿವಾರಿಸಲು – ಶನಿವಾರ ಪೂರ್ಣ ದಿನ ಮತ್ತು ರಜಾ ದಿನಗಳಲ್ಲಿ ತರಗತಿ ನಡೆಸಲು ಆದೇಶ

0

ಮಂಗಳೂರು: 2025 26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಯುಕ್ತ ಸರ್ಕಾರಿ ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ವಿವಿಧ ತಾಲೂಕಿನ ತಹಶೀಲ್ದಾರ್ ಘೋಷಿಸಿದ್ದರು‌.

ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳು ಶನಿವಾರ ಮತ್ತು ಮುಂದಿನ ರಜಾ ದಿನಗಳಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಶೈಕ್ಷಣಿಕ ಕರ್ತವ್ಯದ ಅವಧಿಗಳನ್ನು ಹೊಂದಾಣಿಕೆ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲೆ ಇವರು ಹೊರಡಿಸಿರುವ ಜ್ಯಾಪನ ತಿಳಿಸಲಾಗಿದೆ. ಈ ಮೂಲಕ ಶನಿವಾರವೂ ಪೂರ್ಣ ದಿನಗಳು ಮತ್ತು ರಜಾ ದಿನಗಳಿಗೆ ಕತ್ತರಿ ಬೀಳಲಿದೆ.

LEAVE A REPLY

Please enter your comment!
Please enter your name here