
ಧರ್ಮಸ್ಥಳ: ಗೋಳಿದಪಲ್ಕೆ ಮೆಲಂತಬೆಟ್ಟು ದಿ. ನಾರಾಯಣ ಹಾಗೂ ದಿ. ಯಮುನಾ ಅವರ ಪುತ್ರಿ ರಾಜೇಶ್ವರಿ ಅವರು ವಾತ್ಸಲ್ಯ ಸದಸ್ಯರಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಶಾಸನ ನೀಡುತ್ತಿರುವ ಸದಸ್ಯೆ ರಾಜೇಶ್ವರಿ ಅವರಿಗೆ ವಾತ್ಸಲ್ಯ ವಿದ್ಯಾನಿಧಿ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ಬ್ಯಾಗ್, ಪುಸ್ತಕ, ಕೊಡೆ, ಪೆನ್ನು ಪೆನ್ಸಿಲ್ ಚಪ್ಪಲಿ ಹಾಗೂ ಧರಿಸಲು ವಸ್ತ್ರಗಳನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಂ ಅವರು ವಿತರಿಸಿದರು.
ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾವಸಂತ್, ವಲಯದ ಮೇಲ್ವಿಚಾರಕ ರವಿ, ಒಕ್ಕೂಟದ ಪದಾಧಿಕಾರಿ ಸರಸ್ವತಿ ಹಾಗೂ ಜ್ಞಾನವಿಕಾಸ ತಂಡದ ಸದಸ್ಯರಾದ ರಾಧಾ, ಹರಿಣಿ, ಸೇವಾಪ್ರತಿನಿಧಿ ಲೀಲಾ ಉಪಸ್ಥಿತರಿದ್ದರು.