
ಮಡಂತ್ಯಾರು: ಗಂಗೂಬಾಯಿ ಹಾನಗಲ್ ವಿಶ್ವ ವಿದ್ಯಾನಿಲಯದ 2025ನೇ ಸಾಲಿನಲ್ಲಿ ನಡೆಸಲಾದ ಭರತನಾಟ್ಯ ಶಾಸ್ತ್ರೀಯ ನೃತ್ಯದ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ನಿಯತಿ ನೃತ್ಯ ನಿಕೇತನದ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಹಾಜರಾದ 24 ವಿದ್ಯಾರ್ಥಿನಿಯರಲ್ಲಿ ಎಲ್ಲರೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 10 ವಿದ್ಯಾರ್ಥಿನಿಯರು ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಹಾಗೂ 20 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಶಾರ್ವರಿ, ಶಾನ್ವಿ, ಪ್ರಣಿತಾ, ಸಿಂಚನ, ಧಾತ್ರಿ, ಸಮೃದ್ಧಿ, ರಿತಾ, ಹವನ, ರಶ್ಮಿ, ಅಕ್ಷಯ ಗೋಖಲೆ, ಶ್ರೀರಕ್ಷಾ, ಭೂಮಿಕಾ, ಪ್ರವಿತ, ಸಮನ್ವಿ, ರಿತಿಕಾ, ವೈಷ್ಣವಿ, ಕೇಷ್ಣಿ, ಗಣ್ಯಶ್ರೀ, ಶ್ರೀನಿಕ, ಪ್ರಾಪ್ತ, ಹಂಸಿಕಾ, ಆಧ್ಯ, ಕೃತಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ನಿಯತಿ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ನಿಶಾ ಪ್ರಸಾದ್ ತರಬೇತಿ ನೀಡಿದ್ದಾರೆ.