
ಬೆಳ್ತಂಗಡಿ: ಬ್ರಹ್ಮಾವರ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಬಂಧಿಸಿರುವುದು ಕಾನೂನು ಬಾಹಿರ ಎಂದು ಈ ವಿಚಾರದಲ್ಲಿ ಮುಖ್ಯಮಂತ್ರಿ ಗಳು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿಯ ಪರವಾಗಿ ಬಿಎಂ ಭಟ್ ತಹಶೀಲ್ದಾರ್ ಗೆ ಪತ್ರ ನೀಡಿದ್ದಾರೆ.
ಬಿಜೆಪಿ ನಾಯಕರೋರ್ವರನ್ನು ರಾಜಕೀಯವಾಗಿ ಅವಮಾನಕರವಾಗಿ ಟೀಕಿಸಿರುವುದನ್ನು ನೆಪಮಾಡಿ,ಯಾರದ್ದೋ ಪ್ರಭಾವಿ ಒತ್ತಡದಿಂದ ಮಹೇಶ್ ಶೆಟ್ಟಿಯ ಬಂಧನವಾಗಿದೆ ಎಂಬ ಅನುಮಾನವಿದೆ. ಭಾರತೀಯ ನಾಗರಿಕ ಸುರಕ್ಷ ಸಂಹಿತೆ ಕಲಂ 35ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ,ಕೂಡಲೇ ಇದಕ್ಕೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕೆಂದು ಪತ್ರದಲ್ಲಿ ನಮೂದಿಸಲಾಗಿದೆ. ಪತ್ರವನ್ನು ಸಿಪಿಐಎಂನ ಮುಖಂಡ ಬಿ ಎಂ ಭಟ್ ನೇತೃತ್ವದ ತಂಡ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂಗೆ ನೀಡಿದರು.