
ಧರ್ಮಸ್ಥಳ: ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಬನ್ನೇರುಘಟ್ಟದಲ್ಲಿರುವ ಸಮೀರ್ ಬಾಡಿಗೆ ಮನೆಗೆ ಧರ್ಮಸ್ಥಳ ಪೊಲೀಸರು ಆಗಮಿಸಿದ್ದಾರೆ. ಈಗಾಗಲೇ ಸಮೀರ್ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಸಂಬಂಧ ನೋಟಿಸ್ ನೀಡಿದರೂ ಠಾಣೆಗೆ ವಿಚಾರಣೆಗೆ ಹಾಜರಾಗದ ಯೂಟ್ಯೂಬರ್ ಸಮೀರ್ ಅವರನ್ನು ಬಂಧನ ಮಾಡಲು ವಾರೆಂಟ್ ಜೊತೆ ಧರ್ಮಸ್ಥಳ ಪಿಎಸ್ ಐ ಅನಂದ್.ಎಮ್ ನೇತೃತ್ವದ ತಂಡ ಬೆಂಗಳೂರಿನ ಬನ್ನೆರುಘಟ್ಟದಲ್ಲಿರುವ ಸಮೀರ್ ಮನೆಯನ್ನು ಇಂದು ಸುತ್ತುವರಿದ್ದಾರೆ ಎನ್ನಲಾಗಿದೆ.