
ಕನ್ಯಾಡಿ-2: ಹಿಂದೂ ಧಾರ್ಮಿಕ ಸೇವಾ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕನ್ಯಾಡಿ 2 ಇದರ ಆಶ್ರಯದಲ್ಲಿ ಕನ್ಯಾಡಿ ಶಾಲಾ ಆವರಣದಲ್ಲಿ ನಡೆಯುವ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್ ಪಿ., ಕಾರ್ಯದರ್ಶಿ ಗಣೇಶ್ ಗೌಡ ಬಜಿಲ, ಉಪಾಧ್ಯಕ್ಷ ಅರುಣ್ ನಾಯ್ಕ ನೆಲ್ಲಿಗುಡ್ಡೆ, ಸಹಕಾರ್ಯದರ್ಶಿ ವಿದ್ಯಾಧರ ರೈ ಪಜಿರಡ್ಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಚೇತನ್ ಗುಡಿಗಾರ್ ಅಲೆಕ್ಕಿ, ಕಾರ್ಯಾಧ್ಯಕ್ಷ ಗೋವಿಂದ ಸುವರ್ಣ ಪೊಂಗಾರು, ಉಪಾಧ್ಯಕ್ಷರಾದ ವಸಂತ್ ನಾಯ್ಕ, ಸುಂದರ ಗೌಡ ಬಜಿಲ, ಸಮಿತಿಯ ಪ್ರಮುಖರಾದ ಸುದರ್ಶನ್ ಕನ್ಯಾಡಿ, ಪ್ರಭಾಕರ ಗೌಡ, ರಾಧೇಶ್ ಗೌಡ ಉಪಸ್ಥಿತರಿದ್ದರು.