
ಕುವೆಟ್ಟು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅoಗವಾಗಿ ಬೆಳ್ತಂಗಡಿ ವಲಯದ ಹಿರಿಯ ಛಾಯಾಗ್ರಹಕ ಕುಶಾಲಪ್ಪ ರೈ ಬಿoಬ ಸ್ಟುಡಿಯೋ ಪದ್ಮುoಜ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಆ.19ರoದು ಗುರುವಾಯನಕೆರೆ ಛಾಯಾಭವನದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷೆ ಸಿಲ್ವಿಯಾ ಬೆಳ್ತಂಗಡಿ ಅವರು ವಹಿಸಿದ್ದರು.
ವೇದಿಕೆಯಲ್ಲಿ ನೂತನ ಅಧ್ಯಕ್ಷ ರವಿ ಪೂಜಾರಿ ನಾರಾವಿ, ವಲಯದ ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಉಜಿರೆ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರದ್ವಾಜ್ ಉಜಿರೆ, ವಲಯದ ಸ್ಥಾಪಕಾ ಅಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ಗೌರವಾಧ್ಯಕ್ಷ ಜಗದೀಶ್ ಜೈನ್ ಧರ್ಮಸ್ಥಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವ ಛಾಯಾಗ್ರಹಣ ದಿನಾಚರಣೆ ಬಗ್ಗೆ ವಲಯದ ಮಾಜಿ ಅಧ್ಯಕ್ಷ ಕೆ. ವಸಂತ್ ಶರ್ಮ ಮಾತನಾಡಿದರು. ಸನ್ಮಾನಿತರಾದ ಕುಶಾಲಪ್ಪ ರೈ ಪದ್ಮುoಜ ಅವರು ಸಂಘಟನೆಯಲ್ಲಿ ನೀಡಿದ ಸಹಕಾರ ಹಿoದೆ ಛಾಯಾಗ್ರಹಣ ಮಾಡುವ ಸಂದರ್ಭದಲ್ಲಿ ತೊಂದರೆಗಳನ್ನು ಅನುಭವಿಸಿದ ವಿಚಾರಗಳನ್ನು ಪಾಲಾಕ್ಷ ಪಿ. ಸುವರ್ಣ ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು. ಗಣೇಶ್ ಹೆಗ್ಡೆ ನಾರಾವಿ ಪ್ರಾರ್ಥನೆಗೈದರು. ಸಿಲ್ವಿಯಾ ಬೆಳ್ತಂಗಡಿ ಸ್ವಾಗತಿಸಿದರು. ಉಮೇಶ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ ಧನ್ಯವಾದವಿತ್ತರು.