
ಧರ್ಮಸ್ಥಳ: ಕನ್ಯಾಡಿ -2 ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ 22ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಬಹಳ ವಿಜ್ರಂಭಣೆಯಿಂದ ಕನ್ಯಾಡಿ ಶಾಲಾ ವಠಾರದಲ್ಲಿ ನಡೆಯಿತು.
ಪ್ರಭಾಕರ್ ಗೌಡ ಬೊಳ್ಮಾ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಅವರ ಅಧ್ಯಕ್ಷತೆಯಲ್ಲಿ ಲಯನ್ ದೇವದಾಸ ಎಲ್. ಶೆಟ್ಟಿ ಹಿಬರೋಡಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆ ಮಾಡಿದರು. ಸೌತಡ್ಕ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಶುಭಶಂಶನೆ ಶ್ರೀ ಸತ್ಯಪ್ರಿಯ ಕಲ್ಲುರಾಯ ಅವರು ನೆರವೇರಿಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ ಪರಮೇಶ್ವರ, ಶಿವ ಪಾರ್ವತಿ ಕಲ್ಯಾಣ ಮಂಟಪ ಮಾಲಕ ಗಿರೀಶ್ ಕುದ್ರೆಂತ್ತಾಯ, ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದೇವಸ್ಯ ಟಿ., ಪವಿತ್ರ ಸುಕುಮಾರ ಶೆಟ್ಟಿ ಬೃಂದಾವನ ಮನೆ ಕನ್ಯಾಡಿ 2, ವಿನಾಯಕ ರಾವ್ ಸೇವಾ ಭಾರತಿ ಕನ್ಯಾಡಿ-2, ಧರ್ಮಸ್ಥಳ ಗ್ರಾ. ಪಂ. ಸದಸ್ಯರಾದ ವಸಂತ ನಾಯ್ಕ, ರೇವತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ. ನಂದ, ಕನ್ಯಾಡಿ -2 ಪ್ರ.ಮು.ಶಿ ಪುಷ್ಪಾ ಎನ್. ಉಪಸ್ಥಿತರಿದ್ದರು.
ಸಂಜೆಯ ಸಮಾರೋಪ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ. ಶ್ರೀನಿವಾಸರಾವ್ ಪಂದ್ಯಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಸಮಿತಿಯ ಸರ್ವ ಪದಾಧಿಕಾರಿಗಳು, ಕೆ.ಎಫ್.ಸಿ ತಂಡದ ಕಾರ್ಯದರ್ಶಿ ಯತೀಶ್ ಸುವರ್ಣ ಹಾಗೂ ಸರ್ವ ಸದಸ್ಯರುಗಳು, ಶಾಲಾ ಎಸ್.ಡಿ ಎಂ.ಸಿ ಯ ಸರ್ವಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದದವರು, ಊರಿನ ಬಾಂಧವರು ಉಪಸ್ಥಿತರಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಯೋಜಕ ರಾಜೇಂದ್ರ ಅಜ್ರಿ ಸ್ವಾಗತಿಸಿ, ಶ್ರೇಯಸ್ ರಾವ್ ಕನ್ಯಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಖಜಾಂಜಿ ಸೂರ್ಯಪ್ರಕಾಶ್ ಎಂ. ಧನ್ಯವಾದವಿತ್ತರು.