
ಅರಸಿನಮಕ್ಕಿ: ಪ್ರತಿಯೊಬ್ಬರೂ ನಾನು, ನನ್ನ ಕುಟುಂಬ, ನನ್ನ ಮನೆ ಎಂದು ಸಂಕುಚಿತವಾಗಿ ಯೋಚಿಸಿದರೆ ನಮ್ಮ ನೆಲದ ಸಂಸ್ಕೃತಿ, ಪರಂಪರೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಸಾಧ್ಯವಾಗದು. ಈ ನೆಲದ ಶ್ರೇಷ್ಠತೆಯನ್ನು ಪರಿಚಯಿಸುವ ಮೂಲಕ ಚೈತನ್ಯಮಿತ್ರ ಕಲಾವೃಂದ ಸಂಘಟನೆ ದೇಶ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಸಂಸ್ಕಾರ ಭಾರತಿಯ ತಾಲೂಕು ಅಧ್ಯಕ್ಷ ಸಂಪತ್ ಸುವರ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಅರಸಿನಮಕ್ಕಿಯಲ್ಲಿ ನಡೆದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಸಂದೇಶವನ್ನು ನೀಡಿದರು. ಭಗವದ್ಗೀತೆಯಲ್ಲಿರುವ ಶ್ರೀಕೃಷ್ಣ ನ ಸಂದೇಶವು ಬದುಕಿಗೆ ದಾರಿದೀಪ. ಗೀತೆಯ ವಿಚಾರಧಾರೆಗಳನ್ನು ಶಾಲಾ ಪಠ್ಯದಲ್ಲಿ ಅಳವಡಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾಪು ಉಪ್ಪರಡ್ಕ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಧರ್ಣಪ್ಪ ಗೌಡರು ಎಲ್ಲರನ್ನೂ ಒಗ್ಗೂಡಿಸಿ ಉತ್ಸವ ನಡೆಸುವ ಸಂಘಟನೆಯ ಕೆಲಸವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಾಧಕರಾದ ಯುವ ಕಲಾವಿದ ಸಂತೋಷ್ ಗೋಖಲೆ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಶೈಕ್ಷಣಿಕ ಸಾಧನೆ ಮಾಡಿದ ಸುಚಿತ್ರ, ಸುಮಾರವರನ್ನು ಮತ್ತು ಎಸ್.ಎಸ್. ಎಲ್.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿಜೇತ್ ಶೆಟ್ಟಿಯವರ ಪರವಾಗಿ ಅವರ ತಾಯಿ ಸುಂದರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುದ್ದು ಕೃಷ್ಣ ವೇಷ ಪ್ರದರ್ಶಿಸಿದ ಚಿಣ್ಣರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಚೈತನ್ಯಮಿತ್ರ ಸಂಘಟನೆಯ ಅಧ್ಯಕ್ಷರಾದ ಗಣೇಶ್ ಹೊಸ್ತೋಟ ಅಧ್ಯಕ್ಷತೆ ವಹಿಸಿ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ಉಪಸ್ಥಿತರಿದ್ದರು.
ಧನಿಕ್ಷಾ ಪ್ರಾರ್ಥಿಸಿದರು. ಶಶೀಂದ್ರ ಆಚಾರ್ಯ ಸ್ವಾಗತಿಸಿ ವೃಷಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಮೊದಲಾದವರು ಭೇಟಿ ನೀಡಿ ಶುಭಹಾರೈಸಿದರು. ಸಂಘಟನೆಯ ಪದಾಧಿಕಾರಿಗಳಾದ ಮುರಳೀಧರ ಶೆಟ್ಟಿಗಾರ್, ಅಭಿನಯ ಭಟ್, ನವೀನ್ ರೈ, ಗಣೇಶ್ ಪಲಸ್ತಡ್ಕ, ಶಿವರಾಮ ಗೌಡ, ಶ್ರೀಕಾಂತ್ ಕಾಂತ್ರೆಲ್, ಚಂದ್ರಶೇಖರ ಗೌಡ, ದಯಾನಂದ ಗೌಡ, ಶಶಿಕಾಂತ್ ಶೆಟ್ಟಿಗಾರ್,ಕೃಷ್ಣಪ್ಪ ಗೌಡ, ರವೀಂದ್ರ ಆಚಾರ್ಯ, ಹರ್ಷ ಕುಮಾರ್, ಸುದರ್ಶನ್ ಗೌಡ, ಜಯಪ್ರಸಾದ್ ಶೆಟ್ಟಿಗಾರ್, ಧನ್ಯ ಗಣೇಶ್, ನೀತಾ ರಾಧೇಶ್, ಭಾರತಿ, ಸರೋಜಿನಿ ನಾಯ್ಕ್, ಧನ್ಯ ಶೆಟ್ಟಿಗಾರ್, ಸಂದೀಪ್, ಧನ್ಯರಾಜ್ ಮೊದಲಾದವರು ಸಹಕರಿಸಿದರು.