
ಕೊಯ್ಯೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಯ್ಯೂರು ಮತ್ತು ಶ್ರೀಕೃಷ್ಣ ಭಜನಾ ಮಂಡಳಿ ಆದೂರು ಪೇರಾಲ್ ಕೊಯ್ಯೂರು ಹಾಗೂ ಊರವರ ಜಂಟಿ ಆಶ್ರಯದಲ್ಲಿ 38ನೇ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೊಯ್ಯೂರಿನ ಆದೂರು ಪೇರಾಲಿನಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಕೊಡುಗೈದಾನಿ ಸಮಾಜ ಸೇವಕ ಕೂಸಪ್ಪ ಪೂಜಾರಿ ಬಜಿಲ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಾರ್ವಜನಿಕ ಗಣೇಶ ಸಮಿತಿಯ ಅಧ್ಯಕ್ಷ ಯಶವಂತ ಗೌಡ ಪೂರ್ಯಾಳ, ಭಜನಾ ಮಂಡಳಿ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಕಾಸು, ಅರ್ಚಕ ಲಕ್ಷ್ಮಿ ನಾರಾಯಣ ಭಟ್ ಆದರ್ಶ ನಗರ, ಮಹಿಳಾ ಭಜನಾ ತಂಡದ ಅಧ್ಯಕ್ಷೆ ಪೂರ್ಣಿಮಾ ಜಂಕಿನಡ್ಕ. ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ.ಚಂದ್ರಶೇಖರ ಸಾಲ್ಯಾನ್, ಪೂಜಾ ಸಮಿತಿಯ ಗೌರವ ಅಧ್ಯಕ್ಷ ದೇಜಪ್ಪ ಗೌಡ ಬೆಲ್ದೆ,ಗೌರವ ಸಲಹೆಗಾರ ಪಿ. ಬಾಲಕೃಷ್ಣ ಸಾಲ್ಯಾನ್ ಆದರ್ಶ ನಗರ, ಉಪಾಧ್ಯಕ್ಷರಾದ ಶೇಖರ ಗೌಡ ‘ಬ್ರಾಮರಿ’ ಕೋರ್ಯಾರು ಕೋಶಾಧಿಕಾರಿ ವಿನಯ ಕೆ. ಭಜನಾ ಮಂಡಳಿಯ ಗೌರವಾಧ್ಯಕ್ಷ ವಿಶ್ವನಾಥ ಗೌಡ ಬಚ್ಚಿರೆದಡಿ, ಕಾರ್ಯದರ್ಶಿ ಓಬಯ್ಯ ನಾಯ್ಕ ಆದರ್ಶ ನಗರ ಭಜನಾ ಮಂಡಳಿಯ ಹಾಗೂ ಸಮಿತಿಯ ಮಾಜಿ ಕಾರ್ಯದರ್ಶಿ ಮನೋಜ್ ಕಜೆ ಮತ್ತು ಭಜನಾ ಮಂಡಳಿಯ ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಊರವರು ಉಪಸ್ಥಿತರಿದ್ದರು.
ನಂತರ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.