
ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಆಟೋ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆ. 15ರಂದು ಜರಗಿದವು. ಪೂರ್ವಾಹ್ನ ಕಳಿಯ ಬೀಡಿನ ಸುರೇಂದ್ರ ಕುಮಾರ್ ಜೈನ್ ಸಾಂಪ್ರದಾಯಿಕವಾಗಿ ತೆಂಗಿನ ಸಸಿ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಪರಾಹ್ನ ಪ್ರಾರಂಭವಾದ ಕ್ರೀಡಾಕೂಟದಲ್ಲಿ ಪುರುಷರು ಮಹಿಳೆಯರು ಹಾಗೂ ಬಾಲಕ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜೊತೆಗೆ ಮುದ್ದುಕೃಷ್ಣ ಸ್ಪರ್ಧೆ ಶ್ರೀಕೃಷ್ಣ ದೇವರ ಭಕ್ತಿಗೀತೆ ಸ್ಪರ್ಧೆ ಶ್ರೀ ಕೃಷ್ಣ ದೇವರ ಚಿತ್ರ ಬಿಡಿಸುವ ಸ್ಪರ್ಧೆ ಸಾರ್ವಜನಿಕರಿಗೆ ಭಕ್ತಿ ಗೀತೆ ಸ್ಪರ್ಧೆ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಪುರುಷರಿಗೆ ವಾಲಿಬಾಲ್ ಹಗ್ಗ ಜಗ್ಗಾಟ, ಮಡಕೆ ಹೊಡೆಯುವುದು, ಕಬಡ್ಡಿ ಪಂದ್ಯಾಟ ಜರುಗಿದರೆ, ಮಹಿಳೆಯರಿಗೆ ತ್ರೋಬಾಲ್ ಹಗ್ಗ ಜಗ್ಗಾಟ ಮಡಕೆ ಹೊಡೆಯುವ ಸ್ಪರ್ಧೆ ಲಕ್ಕಿ ಗೇಮ್, ಸಂಗೀತ ಕುರ್ಚಿ ಹಾಗೂ ಎರಡು ವಿಭಾಗದಲ್ಲಿ ನಿಧಾನ ದ್ವಿಚಕ್ರವಾಹನ ಚಾಲನಾ ಸ್ಪರ್ಧೆ ಜರಗಿತು ಹಾಗೂ ಬಾಲಕ ಬಾಲಕಿಯರಿಗೆ ವಿವಿಧ ಸ್ಪರ್ಧೆಗಳು ಜರುಗಿತು.
ಸಂಜೆ ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಹರೀಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಿತು. ಈ ಸಭೆಯಲ್ಲಿ ಸತೀಶ್ ಕುಮಾರ್ ಆರ್.ಎನ್., ಪ್ರಶಾಂತ್ ಉದ್ಯಮಿ ಬೆಳ್ತಂಗಡಿ, ಕೇಶವ ಪೂಜಾರಿ ನಾಳ ದಿನೇಶ್ ಗೌಡ ಕಲಾಯಿತೊಟ್ಟು, ವಿಕ್ರಂ ವಂಜಾರೆ, ಬೇಬಿಗೌಡ ಪೇರಾಜೆ ಹರೀಶ್ ರಾವ್ ನಾಳ, ನಿತಿನ್ ಶೆಟ್ಟಿ ನಿತೇಶ್ ಮಜಲು,ಡಾ ಅನಂತ್ ಭಟ್, ಜನಾರ್ದನ ಗೌಡ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಯಕ್ಷ ಕೂಟ ನಾಳ ಇವರ ಸಂಯೋಜನೆಯೊಂದಿಗೆ ಅಸಿಕ ಪರಿಣಯ ಎಂಬ ಯಕ್ಷಗಾನ ಬಯಲಾಟ ಜರಗಿತು. ದೇವಸ್ಥಾನದ ಅಭಿವೃದ್ಧಿ ಸಮಿತಿ, ಮಾತೃ ಮಂಡಳಿ, ಭಜನಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಯುವ ಭಕ್ತರು ಹಾಜರಿದ್ದು ಸಹಕರಿಸಿದರು.