
ಕಿಲ್ಲೂರು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ಯಕ್ಷಗಾನ ಮಂಡಳಿ ವತಿಯಿಂದ ನವರಾತ್ರಿ ಯಲ್ಲಿ ನಡೆಯಲಿರುವ ಯಕ್ಷಗಾನದ ಸಹಾಯಾರ್ಥ ಆ. 16 ಸಂಕ್ರಮಣದಂದು ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಅದೃಷ್ಟ ಚೀಟಿ ಬಿಡುಗಡೆ ಮಾಡಲಾಯಿತು.
ಲಕ್ಕಿಡಿಪ್ ಪುಸ್ತಕಕ್ಕೆ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನದ ಆಡಳಿತ ಸಮಿತಿಯಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಸದಸ್ಯ ಸತೀಶ್ ಕಾಮತ್ ದೇಣಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಿದರು. ಯಕ್ಷಗಾನ ಮಂಡಳಿಯ ಅಧ್ಯಕ್ಷ ರವಿ ಪೂಜಾರಿ, ಕಾರ್ಯದರ್ಶಿ ಗೋಪಾಲ ಶಾಂತಿಗುಡ್ಡೆ, ಕೋಶಾಧಿಕಾರಿ ಸತೀಶ್ ಪೂಜಾರಿ ಮಾಲೂರು, ನಾಟ್ಯಗುರು ಚಂದ್ರ ಶೇಖರ ಮುಂಡಾಜೆ, ಭಕ್ತ ರು ಹಾಜರಿದ್ದರು