
ಬೆಳ್ತಂಗಡಿ: ಉಭಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ’, ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ, ಎಂಬ ಘೋಷ ವಾಕ್ಯಗಳೊಂದಿಗೆ ಬ್ಲಾಕ್ ಕಾಂಗ್ರೆಸ್ ಎದುರುಗಡೆ ಸಾಂಕೇತಿಕವಾಗಿ ಪ್ರತಿಭಟನೆ, ಮಾಡಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾತನಾಡಿ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ “ಬೃಹತ್ ಅಕ್ರಮ” ನಡೆದಿದ್ದು. ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಈ ಅಕ್ರಮಗಳನ್ನು ನಡೆಸಿದೆ. ಚುನಾವಣಾ ಆಯೋಗವು ಇನ್ನು ಪ್ರಜಾಪ್ರಭುತ್ವದ ಕಾವಲುಗಾರನಾಗಿ ಉಳಿದಿಲ್ಲ, ಅದು ಕಾರ್ಯಾಂಗದ ಕೈಗೊಂಬೆಯಾಗಿದೆ” ಎಂದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಕೆ.ಎಂ. ನಾಗೇಶ್ ಕುಮಾರ್ ಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಕಾಂಗ್ರೆಸ್ ಗ್ರಾಮೀಣ ಸೇವಾದಳದ ಅಧ್ಯಕ್ಷ ಪ್ರದೀಪ್ ಕೆ.ಸಿ., ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಝರ್ ನಾವೂರು, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಝೀನತ್ ಉಜಿರೆ, ಮೇಳ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷೆ ಶೋಭಾ ನಾರಾಯಣ ಗೌಡ, ತಾಲೂಕು ಕೆಡಿಪಿ ಸದಸ್ಯರಾದ ಸುನಿಲ್ ಜೈನ್, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಪೇರಿಂಜೆ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ವೀರೇಂದ್ರ ಕುಮಾರ್ ಜೈನ್, ಆರಾಧನಾ ಸಮಿತಿಯ ಸದಸ್ಯ ಬಾಲಕೃಷ್ಣ ಭಟ್, ಪ್ರಮುಖರಾದ ಹಣ್ಣು ಪರಮಾರು ವಿಜಯ ಗೌಡ ಬೆಳಾಲು, ಶರೀಫ್ ಶಬರಬೈಲ್, ಮಹಮ್ಮದ್ ಹನೀಫ್ ಉಜಿರೆ, ಉಮೈರಾ ಬಾನು, ಕುಶಾಲಪ್ಪ ಗೌಡ ಶಿರ್ಲಾಲು, ಡಯಾನಾ ಪುದುವೆಟ್ಟು, ಸಂತೋಷ್ ಕೆ.ಸಿ ಪುದುವೆಟ್ಟು, ಕುಶಾಲಪ್ಪ ಗೌಡ ಕಳೆಂಜ ಹಾಗೂ ಪ್ರಮುಖರು ಉಪಸ್ಥಿತರಿದ್ದರು.