ಬೆಳ್ತಂಗಡಿಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ಬೃಹತ್ ಪ್ರದರ್ಶನ, ಮಾರಾಟ ಮೇಳ

0

ಬೆಳ್ತಂಗಡಿ: ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ಅವರ ಸಂಯೋಜನೆಯಲ್ಲಿ ನಗರದ ಬಂಟ್ಸ್ ಹಾಸ್ಟೆಲ್‌ ರಸ್ತೆಯ ಹೊಟೇಲ್ ವುಡ್ ಲ್ಯಾಂಡ್ಸ್‌ನಲ್ಲಿ ಆರಂಭಗೊಂಡಿರುವ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳು, ಕೈಮಗ್ಗ ಸೀರೆಗಳು, ಆಭರಣಗಳು ಮತ್ತು ಕಲಾಕೃತಿಗಳ ಬೃಹತ್‌ ಪ್ರದರ್ಶನ ಮತ್ತು ಮಾರಾಟ ರಾಜಸ್ಥಾನ ಬೃಹತ್ ಮಾರಾಟ ಮೇಳವು ಬೆಳ್ತಂಗಡಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಆ.14ರಿಂದ ಪ್ರಾರಂಭಗೊಂಡು ಆ. 26ರವರೆಗೆ ನಡೆಯಲಿದೆ.

ಈ ಗ್ರಾಮೀಣ ಮೇಳದಲ್ಲಿ ರಾಜಸ್ಥಾನ ಸಹಿತ ವಿವಿಧ ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು, ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದ್ದು ಮಾರಾಟ, ಪ್ರದರ್ಶನ ನಡೆಯಲಿದೆ. ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓಡಿಶಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್ ಶೀಟ್ಗಳು, ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್ ಶೀಟ್ ಗಳು, ಇನ್ನಿತರ ಕೈಮಗ್ಗದ ಸೀರೆಗಳು ಲಭ್ಯವಿವೆ. ಜೋಧುರ್ ಕರಕುಶಲ ಮರದ ಪೀಠೋಪಕರಣಗಳು, ಸಾರಂಗ್ಟುರ್ ಮರದ ಪೀಠೋಪಕರಣಗಳು, ಹೈದರಬಾದ್ ಕಪ್ಪು ಮೇಟಲ್‌ನ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು, ನೀಲಿ ಬಣ್ಣದ ಕ್ರಾಕರಿ ಐಟಮ್ ಗಳ ಬೃಹತ್ ಸಂಗ್ರಹವಿದೆ ಎಂದು ಮೇಳದ ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here