
ಗೇರುಕಟ್ಟೆ: ಆಡಳಿತ ಸಮಿತಿಯ ಅಧ್ಯಕ್ಷ ಹಾಜಿ ಅಬೂಬಕ್ಕರ್ ದ್ವಜಾರೋಹಣಗೈದರು. ಖತೀಬರಾದ ಎಫ್. ಎಚ್. ಮಹಮ್ಮದ್ ಮಿಸ್ಬಾಹಿ ಸಂದೇಶ ಭಾಷಣಗೈದರು. ಸದರ್ ಉಸ್ತಾದ್ ಪ್ರತಿಜ್ಞಾವಿಧಿ ಬೋಧಿಸಿದರು.
ಆಡಳಿತ ಸಮಿತಿಯ ಸದಸ್ಯರು, ಅಧ್ಯಾಪಕ ವೃಂದ, ಕೆ.ಎಂ.ಜೆ., ಎಸ್.ವೈ.ಎಸ್.ಎಸ್.ಎಸ್.ಎಫ್ ಸ್ವಲಾತ್ ಸಮಿತಿ, ಎಸ್.ಬಿ.ಎಸ್. ಹಾಗೂ ಪೋಷಕರು ಮದರಸ ಮಕ್ಕಳು, ಜಮಾಅತರು ಹಾಜರಿದ್ದರು.
ಮದರಸ ಮಕ್ಕಳ ಸ್ಕೌಟ್ ಪ್ರದರ್ಶನ ನಡೆಯಿತು. ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಹಾಡಿದರು. ಝಿಯಾದ್ ಮುಈನಿ ಸ್ವಾಗತಿಸಿದರು. ಸದರ್ ಉಸ್ತಾದ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.