
ಕಾಶಿಪಟ್ಣ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸ ಇದರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ, ಧ್ವಜಾರೋಹಣ, ರಾಷ್ಟ್ರಗೀತೆ, ಸಂದೇಶ ಭಾಷಣ, ಸನ್ಮಾನ ವಿತರಣೆ, ಸಿಹಿ ತಿಂಡಿ ವಿತರಣೆ ಕಾರ್ಯಕ್ರಮಗಳು ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.
ಸ್ಥಳೀಯ ಖತೀಬರಾದ ಎಸ್.ಎ. ಅಬೂಬಕ್ಕರ್ ನಿಝಾಮಿ ಪ್ರಾರ್ಥಿಸಿ ಸಂದೇಶ ಭಾಷಣ ಮಾಡಿದರು. ನಂತರ ಜಮಾಅತ್ ಅಧ್ಯಕ್ಷ ಕೆ.ಎಸ್. ಪುತ್ತುಮೋನು ಧ್ವಜಾರೋಹಣ ಮಾಡಿದರು. ನಂತರ ಮದ್ರಸ ಮುಅಲ್ಲಿಮ್ ಅಕ್ಬರ್ ಅಲಿ ಅಝ್ಹರಿ ಸ್ವಾಗತಿಸಿದರು. ಪ್ರಸ್ತುತ ಸಭೆಯಲ್ಲಿ ಜಮಾಅತ್ ಉಪಾಧ್ಯಕ್ಷ ಶಬೀರ್, ಪ್ರಾದಾನ ಕಾರ್ಯದರ್ಶಿ ಪಿ.ಎಚ್. ಅಬ್ದುಲ್ ರಹ್ಮಾನ್, SKSSF ಶಾಖೆ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಕೆ.ಎಸ್. ಸಹದ್, SKSSF ಪಡ್ಡಂದಡ್ಕ ಕ್ಲಸ್ಟರ್ ಅಧ್ಯಕ್ಷ ಖಾಲಿದ್ ಅಬ್ದುಲ್ ಖಾದಿರ್, ಕೆ.ಎಸ್. ಆಬಿದ್, ಯೂಸುಫ್ ಹಾಜಿ, ಅಬೂಸ್ವಾಲಿಹ್, ಮುಹಮ್ಮದ್ ದಾರುನ್ನೂರ್, ಖಾಸಿಂ, ಬಿಲಾಲ್ ದಾರುನ್ನೂರ್, ಪುತ್ತು ಹಾಜಿ, ಇಖ್ಬಾಲ್, ಸಮದ್, SKSBV ಕಾರ್ಯದರ್ಶಿ ಸಿಯಾಮ್, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಹೋಟೆಲ್ ಫೈವ್ ಸ್ಟಾರ್ ಮಾಲಕ ಶಂಸುದ್ದೀನ್ ಅವರಿಂದ ಪಾನೀಯ ಮತ್ತು ತಿಂಡಿ, MJM ಆಡಳಿತ ಸಮಿತಿ ಹಾಗೂ SKSSF ಕಾಶಿಪಟ್ಣ ಶಾಖೆಯಿಂದ ಸಿಹಿ ತಿಂಡಿ ವಿತರಣೆ ಮಾಡಲಾಯಿತು. ನಂತರ SKSSF ಅಧ್ಯಕ್ಷ ಹಮೀದ್ ವಂದಿಸಿ ಮೂರು ಸ್ವಲಾತಿನೊಂದಿಗೆ ಸಭೆಯು ಮುಕ್ತಾಯವಾಯಿತು.