
ಕಲ್ಮಂಜ: ಸರಕಾರಿ ಪ್ರೌಢಶಾಲೆ ಕಲ್ಮಂಜದಲ್ಲಿ ಕ್ಯಾನ್ ಫಿನ್ ಹೋಂಸ್ ಬೆಂಗಳೂರಿನ ಸಿಎಸ್ಆರ್ ಅನುದಾನದಲ್ಲಿ, ಬೆಳ್ತಂಗಡಿ ರೋಟರಿ ಕ್ಲಬ್ ಮೂಲಕ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯ ಹಸ್ತಾಂತರ ಕಾರ್ಯಕ್ರಮ ಆ. 14 ರಂದು ನಡೆಯಿತು. ಬೆಂಗಳೂರು ಕ್ಕ್ಯಾನ್ಫಿನ್ ಹೋಮ್ಸ್ ನ ಡಿಜಿಎಂ ಪ್ರಶಾಂತ ಜೋಯಿಶ್ ಹಸ್ತಾಂತರ ನೆರವೇರಿಸಿ ಮಾತನಾಡುತ್ತ ಕ್ಯಾನ್ಫಿನ್ ಹೋಂಸ್ ನ ಸಾಧನೆಗಳನ್ನು ಶೌಚಾಲಯದ ಉತ್ತಮ ನಿರ್ವಹಣೆ ಹಾಗೂ ಅಗತ್ಯವಿರುವ ಬಾಲಕರ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬಹುದೆಂಬ ಭರವಸೆ ನೀಡಿದರು. ಅತಿಥಿಯಾಗಿ ಡಾ. ಜಯ ಕುಮಾರ್ ಶೆಟ್ಟಿ ಶುಭ ಹಾರೈಸಿದರು.
ಬೆಂಗಳೂರಿನ ಇಂದಿರಾ ನಗರದ ರೋಟರಿ ಕ್ಲಬ್ ಅಧ್ಯಕ್ಷೆ ಸುಪ್ರಿಯ ಕಾಂದಾರಿ, ಕ್ಯಾಂಪಿಂಗ್ ಹೋಮ್ಸ್ ನ ಡೆಪ್ಯುಟಿ ಮ್ಯಾನೇಜರ್ ಚಿತ್ರಾಂಗದ ಸಾರಾಂಗಿ ರೋಟರಿಯ ವಿದ್ಯಾರ್ಥಿವೇತನ ಸಮಿತಿಯ ಅಬೂಬಕರ್ ಉಪಸ್ಥಿತರಿದ್ದರು. ಶಾಲಾ ಎಸ್. ಡಿ. ಎಂ. ಸಿ ಕಾರ್ಯಾಧ್ಯಕ್ಷ ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಕಾ ಕ್ಯಾನ್ ಫಿ ನ್ ಹೋಮ್ಸ್ನ ಪ್ರಶಾಂತ ಜೋಯಿಶ್, ಶೌಚಾಲಯ ಕಾಮಗಾರಿ ನಿರ್ವಹಿಸಿ ಕೈ ತೊಳೆಯುವ ಬೇಸಿನ್ ರಚಿಸಿ ಕೊಟ್ಟ ವಿದ್ಯಾ ಕುಮಾರ್ ಕಾಂಚೋಡು ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಪೂರನ್ ವರ್ಮ, ಕಾರ್ಯದರ್ಶಿ ಸಂದೇಶ ರಾವ್, ಹಾಲಿ ಅಧ್ಯಕ್ಷ ಪ್ರಕಾಶ್ ಪ್ರಭು, ಕಾರ್ಯದರ್ಶಿ ಡಾ. ಎಂ. ಎಂ. ದಯಾಕರ್, ಮಾಜಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ವೆಂಕಟೇಶ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು. ಎಸ್.ಡಿ.ಎಂ.ಸಿ ಸದಸ್ಯರು ಪೋಷಕ ಬಂಧುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಎಸ್.ಡಿ. ಎಂ.ಸಿ ನಿಕಟಪೂರ್ವ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ಶಾಲಾ ಮುಖ್ಯ ಗುರು ಪೂರ್ಣಿಮಾ ಸ್ವಾಗತಿಸಿ, ಸವಿತಾ ನಿರೂಪಿಸಿದರು. ಸಾವಿತ್ರಿ ವಂದಿಸಿದರು.