
ಉಜಿರೆ: ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅಂಗರಿಕಾ ಸಂಕಷ್ಟಿಯ ಪ್ರಯುಕ್ತ ಯಕ್ಷ ಭಾರತಿ ಕನ್ಯಾಡಿ ಅವರಿಂದ ಶಲ್ಯ ಸಾರಥ್ಯ ನಿರ್ಗಮನ ತಾಳಮದ್ದಳೆ ಜರಗಿತು.
ಭಾಗವತರಾಗಿ ಮಹೇಶ ಕನ್ಯಾಡಿ, ಹಿಮ್ಮೇಳದಲ್ಲಿ ವಾಸುದೇವ ಆಚಾರ್ಯ ಉಜಿರೆ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಶಿತಿಕಂಠ ಭಟ್ ಉಜಿರೆ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ(ಕೌರವ) ಸುರೇಶ ಕುದ್ರಂತಾಯ(ಶಲ್ಯ ) ಹರಿದಾಸ ಗಾಂಭೀರ ಧರ್ಮಸ್ಥಳ ( ಕರ್ಣ ) ಭವ್ಯ ಹೊಳ್ಳ ( ಅಶ್ವಸೇನ ) ಭಾಗವಹಿಸಿದ್ದರು.
ದೇವಳದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಯ ಮತ್ತು ಕಲಾಭಿಮಾನಿಗಳು ಭಾಗವಹಿಸಿದ್ದರು. ರವೀಂದ್ರ ಶೆಟ್ಟಿ ಬಳೆಂಜ ಸ್ವಾಗತಿಸಿ, ವಂದಿಸಿದರು.