ಗೇರುಕಟ್ಟೆ: ಪತಂಜಲಿ ಯೋಗ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ

0

ಗೇರುಕಟ್ಟೆ: ಕರ್ನಾಟಕ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಪುತ್ತೂರು ಇದರ ಕ್ಷೀರಸಂಗಮ ಸಭಾ ಭವನ ಕಳಿಯ ಗೇರುಕಟ್ಟೆ ಶಾಖೆಯಲ್ಲಿ 180ನೇ ದಿನದ ಯೋಗದ ನಿತ್ಯ ಪ್ರಾತ್ಯಕ್ಷಿಕೆಯೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ರಕ್ಷಾಬಂಧನದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ ಭಾರತ ದೇಶ ಮತ್ತು ಸನಾತನ ಧರ್ಮದ ರಕ್ಷಣೆಗೆ ನಾವೆಲ್ಲರೂ ಮಹತ್ವವನ್ನು ನೀಡಿ ಕಂಕಣ ಬದ್ಧರಾಗುವ ಮೂಲಕ ಭಾರತದ ಸಂಸ್ಕೃತಿ ಮತ್ತು ಗೌರವವನ್ನು ಎತ್ತಿ ಹಿಡಿಯಬೇಕೆಂದರು.

ಕೇಂದ್ರದ ಸಹ ಶಿಕ್ಷಕರಾದ ಸುಕೇಶ, ಸತೀಶ ನಾಳ, ಶಿವಣ್ಣ ಆಚಾರ್ಯ, ಕೇಂದ್ರದ ಸಂಚಾಲಕರಾದ ವಿಜಯ, ದಿವಾಕರ ಆಚಾರ್ಯ, ಮಧುಕರ, ರಮೇಶ, ಅಶೋಕ ಆಚಾರ್ಯ, ವಸಂತ ಆಚಾರ್ಯ, ಗಣೇಶ, ಶುಭಮಂಗಳ, ಪದ್ಮಲತಾ, ಭಾರತಿ, ಧರಿತ್ರಿ ಭಾಗವಹಿಸಿ ಪರಸ್ಪರ ರಕ್ಷಾಬಂಧನವನ್ನು ಆಚರಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here