
ವೇಣೂರು: ಉಳ್ಳವರು ಇಲ್ಲದೇ ಇರುವವರಿಗೆ ಹಂಚಿ ಬಾಳುವುದೇ ಬಂಟರ ಶ್ರೇಷ್ಠ ಜೀವನ ಶೈಲಿಯಾಗಿದೆ. ದೇವು ಪೂಂಜರು ನಡೆದಾಡಿದ ಈ ನೆಲದಲ್ಲಿ ಸಮುದಾಯದ ಜನಪರ ಕಾರ್ಯಗಳ ಜೊತೆಗೆ ಪಾರಂಪರಿಕ ಸೊಬಗನ್ನು ಬಂಟರು ಮುಂದುವರಿಸಲೆಂದು ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಕೊಡಮಣಿತ್ತಾಯ ದೈವದ ಮುಕಾಲ್ದಿ ಸುನಿಲ್ ಶೆಟ್ಟಿ ಮಾರೂರು ಬಂಟರ ಗ್ರಾಮ ಸಮಿತಿ ಹೊಸಂಗಡಿ ಬಡಕೋಡಿ ಇವರ ಸಂಯೋಜನೆಯಲ್ಲಿ ಆ.10ರಂದು ಪೆರಿಂಜೆಯ ಬರೇಮೇಲು ಮನೆಯಲ್ಲಿ ಜರುಗಿದ ಆಟಿದ ಗೌಜಿ ಗಮ್ಮತ್ ಕಾರ್ಯಕ್ರಮದಲ್ಲಿ ಗಣ್ಯರಾಗಿ ಭಾಗವಹಿಸಿ ಹೇಳಿದರು.
ಹೊಸಂಗಡಿ ಬಡಕೋಡಿ ಬಂಟರ ಗ್ರಾಮ ಸಮಿತಿಯ ಲಾಂಛನವನ್ನು ಬೆಳ್ತಂಗಡಿ ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷ ಪ್ರತೀಕ್ ಶೆಟ್ಟಿ ಅನಾವರಣಗೊಳಿಸಿದರು. ಹಾಗೂ ಬಿ.ಕಾಂ.ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಶ್ರಾವ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಎರಡು ಗ್ರಾಮದ ಮನೆಮಂದಿ ತಯಾರಿಸಿದ ಬಗೆಬಗೆಯ ಬಹುವಿಧದ ಪಾರಂಪರಿಕ ಖಾದ್ಯಗಳನ್ನು ನೆರೆದವರಿಗೆ ಉಣಬಡಿಸಲಾಯಿತು.
ಗ್ರಾಮ ಸಮಿತಿಯ ಅಧ್ಯಕ್ಷ ರವಿಚಂದ್ರ ಶೆಟ್ಟಿ, ಉಪಾದ್ಯಕ್ಷ ರೋಹಿತ್ ರೈ, ಕೊಪ್ಪಲ ಮಾಜಿ ಅಧ್ಯಕ್ಷ ಬೋಜ ಶೆಟ್ಟಿ, ಬೆಳ್ತಂಗಡಿ ತಾಲೂಕು ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಸಾಮಾನಿ, ಕೋಶಾಧಿಕಾರಿ ರಕ್ಷಿತಾ ಎಸ್. ಶೆಟ್ಟಿ, ಆರಂಬೋಡಿ ಯುವ ಬಂಟರ ವಿಭಾಗದ ಅಧ್ಯಕ್ಷರು, ಪದಾಧಿಕಾರಿಗಳು, ಸುಧಾಕರ್ ಶೆಟ್ಟಿ ಮಿತ್ತೊಟ್ಟ್, ಶಂಭು ಶೆಟ್ಟಿ ಮಾರೂರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ದಿನೇಶ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮವನ್ನು ದುರ್ಗಾ ಪ್ರಸಾದ್ ಶೆಟ್ಟಿ ನಿರೂಪಿಸಿದರು. ಪೂಜಾ ಅಶೋಕ್ ಶೆಟ್ಟಿ ವಂದನಾರ್ಪಣೆಗೈದರು.