
ಬೆಳ್ತಂಗಡಿ: ತಾಲೂಕು ರಾಜ ಕೇಸರಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಅವರ ನೇತೃತ್ವದಲ್ಲಿ 577ನೇ ಸೇವಾ ಯೋಜನೆಯಿಂದ ರಕ್ಷಾ ಬಂಧನ ಕಾರ್ಯಕ್ರಮ ರೆಂಕೆದಗುತ್ತು ಕುತ್ತ್ಯಾರು ಹೊಸ ಮನೆ ಕ್ಷೇತ್ರ ವಠಾರದಲ್ಲಿ ನಡೆಯಿತು.
ದಕ್ಷಿಣ ಕರ್ನಾಟಕ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕ ಚಂದ್ರ ಮೊಗವೀರ ಪ್ರಧಾನ ನುಡಿಯನ್ನಾಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ರಾಜ ಕೇಸರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಸತೀಶ್ ಕಂಗಿತ್ತಿಲ್ಲ, ಖ್ಯಾತ ಚಲನಚಿತ್ರ ನಟಿ ಸಿಂಚನ ಪಿ ರಾವ್, ಖ್ಯಾತ ತುಳು ಚಲನಚಿತ್ರ ವಿಲನ್ ಪಾತ್ರದಾರಿ ಕಲಾ ಮಾಣಿಕ್ಯ ರಾಜೇಶ್ ಕಣ್ಣೂರು, ಖ್ಯಾತ ನಿರೂಪಕ ದೀಕ್ಷಿತ್ ಗಾಣಿಗ, ಎಸಿ ಕ್ರಿಯೇಷನ್ ಸಂಸ್ಥೆಯ ಮಾಲಕ, ಚಲನಚಿತ್ರ, ಶಾರ್ಟ್ ಫಿಲಂ, ಆಲ್ಬಮ್ ಸಾಂಗ್ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವವರು ಮನು ಸುಮನ್, ರಾಜ ಕೇಸರಿ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರಾದ ಸಂತೋಷ್, ಶರತ್, ಸಂದೇಶ್, ವಿನೋದ್, ಕಿಶನ್, ಪ್ರವೀಣ್ ಆಚಾರ್ಯ, ಲೋಹಿತ್, ಪ್ರೇಮ್ ರಾಜ್ ರೋಷನ್ ಮತ್ತು ಊರ ಹಿತೈಷಿಗಳು ಪಾಲ್ಗೊಂಡಿದ್ದರು. ಜಗದೀಶ್ ಲಾಯಿಲ ಸ್ವಾಗತಿಸಿದರು. ಸಂದೀಪ್ ಬೆಳ್ತಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು. ದೇವರಾಜ್ ಪೂಜಾರಿ ಧನ್ಯವಾದವಿತ್ತರು.