
ಧರ್ಮಸ್ಥಳ: ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತು ಸಂಖ್ಯೆ 13ರ ಮೊದಲರ್ಧದ ಉತ್ಖನನ ಕಾರ್ಯ ಪೂರ್ಣಗೊಂಡಿದೆ. ಸುಮಾರು 18 ಅಡಿ ಆಳ,8 ಅಡಿ ಅಗಲ, 22ಅಡಿ ಉದ್ದದಲ್ಲಿ ಶೋಧ ಕಾರ್ಯಾಚರಣೆ ನಡೆದು ಯಾವುದೇ ಕಳೇಬರ ಪತ್ತೆಯಾಗಿಲ್ಲ.
ನಾಳೆ ಪಾಯಿಂಟ್ ನಂ 13ರ ಉಳಿದ ಜಾಗದಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ಶೋಧ ಕಾರ್ಯಾಚರಣೆಯ ನಂತರ ಗುಂಡಿ ಮುಚ್ಚುವ ಕಾರ್ಯ ನಡೆದಿದ್ದು, ಈ ಕಾರ್ಯಾಚರಣೆಗೆ ಎಸ್.ಪಿ. ದಯಾಮರವರ ಗಾಡಿಯ ಲೈಟ್ ಉಪಯೋಗಿಸಲಾಗಿದೆ.