
ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಇದರ ನೇತೃತ್ವದಲ್ಲಿ ಆ. 10ರಂದು ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಸುದ್ದಿ ಬಿಡುಗಡೆ ಪ್ರತಿನಿಧಿ ಸದಾನಂದ ಸಾಲಿಯನ್ ಬಳಂಜ ರಕ್ಷಾ ಬಂಧನದ ಕುರಿತು ವಿಶೇಷ ಬೌದ್ಧಿಕ್ ನೀಡಿ ಎಲ್ಲರೂ ಸಹೋದರ ಭಾವದಿಂದ ಜೀವನ ನಡೆಸಿದಾಗ ಸಮಾಜದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಯಾಗಲು ಸಾಧ್ಯವಿದೆ ಎಂದು ನುಡಿದರು.
ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಕೃಷ್ಣ ಭಜನಾ ಮಂಡಳಿ ಸಂಚಾಲಕ ಪ್ರಮೋದ್ ಪೂಜಾರಿ ಸೂಳಬೆಟ್ಟು, ಮಂಡಳಿಯ ಅಧ್ಯಕ್ಷೆ ಪ್ರಸಿದ್ದಿ ಶೆಟ್ಟಿ, ತರಬೇತುದಾರೆ ಮಾನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.