
ಧರ್ಮಸ್ಥಳ: ಗ್ರಾಮದಲ್ಲಿ ಶವ ಶೋಧ ಪ್ರಕರಣ ಸಂಬಂಧಿಸಿದಂತೆ ಆ.12ರಂದು ಸುಮಾರು 15 ರಿಂದ 20 ನಿಮಿಷ ಜಿಪಿಆರ್ ಮೂಲಕ ಸ್ಥಳ ಸಂಖ್ಯೆ 13 ರಲ್ಲಿ ಶೋಧ ನಡೆಯಿತು.ಈ ವೇಳೆ ಕುರುಹು ಪತ್ತೆಯಾಗದ ಕುರಿತು ಮಾಹಿತಿ ಬಂದಿದೆ. ಸ್ಥಳ ಸಂಖ್ಯೆ 13ನ್ನು ಮತ್ತಷ್ಟು ವಿಸ್ತರಿಸಿ ಶೋಧ ನಡೆಯುತ್ತಿದ್ದು ಇದುವರೆಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಸ್ಥಳದಲ್ಲಿದ್ದು ಎಸಿ ಅವರಿಂದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧಿಕಾರಿಗಳು ರವಿ ಸಿಂಗ್ ಹೆಚ್ಚುವರಿ ಮಾಹಿತಿ ಪಡೆದಿದ್ದಾರೆ.
ಜಿಪಿಆರ್ ಶೋಧದ ಬಳಿಕ 13ನೇ ಸ್ಥಳದ ಕಿಂಡಿ ಅಣೆಕಟ್ಟಿನ ಬಳಿ ಮಿನಿ ಹಿಟಾಚಿ, ಬಳಿಕ ದೊಡ್ಡ ಹಿಟಾಚಿ ಮೂಲಕ ಮುಂದುವರಿದ ಶೋಧ. ಸದ್ಯ 8 ಅಡಿ ಅಗಲ 12 ಅಡಿ ಆಳ ತೋಡಲಾಗಿದೆ.
13ನೇ ಸ್ಥಳಕ್ಕೆಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಆಗಮಿಸಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಯಾವುದೇ ರೀತಿಯ ಪರದೆಯನ್ನು ಬಳಸದೆ ಉತ್ಖನನ ಕಾರ್ಯ ನಡೆಯುತ್ತಿದೆ.