
ಕುಂಡಡ್ಕ: ಶಂಸುಲ್ ಹುದಾ ಮದ್ರಸದಲ್ಲಿ ಆ. 12ರಂದು ಕಾನ್ಫರೆನ್ಸ್ ಮೀಟಿಂಗ್ ನಡೆಯಿತು. ಪ್ರಥಮವಾಗಿ ಈ ಕಾರ್ಯಕ್ರಮವನ್ನು ಕುಂಡಡ್ಕ ಮಸೀದಿಯ ಖತೀಬ್ ಇಲ್ಯಾಸ್ ಮದನಿ ಮಾಚಾರ್ ಅವರು ಉದ್ಘಾಟನೆ ಮಾಡಿದರು.
ಆಡಳಿತ ಸಮಿತಿಯ ಕೋಶಾಧಿಕಾರಿ ಸಮದ್ ಕುಂಡಡ್ಕ ಮಾತನಾಡಿ ‘ಮುರುಗೋಳಿ ರೇಂಜ್ ವ್ಯಾಪ್ತಿಗೆ ಒಳಪಟ್ಟ ಪ್ರತಿಯೊಂದು ಮಸೀದಿಯ ಉಸ್ತಾದರಗಳ ಭಾಗವಹಿಸಿಕೆಯನ್ನು ಶಂಸುಲ್ ಹುದಾ ಜುಮಾ ಮಸೀದಿಯ ಆಡಳಿತ ಸಮಿತಿಯು ಸ್ವಾಗತಿಸುತ್ತದೆ. ಹಾಗೂ ಇಂತಹ ಕಾನ್ಫರೆನ್ಸ್ ಪ್ರತಿಯೊಂದು ಮಸೀದಿಯಲ್ಲಿ ಇಂತಹ ಕಾನ್ಫರೆನ್ಸ್ ನಡೆಯುವುದು ಬಹಳ ಒಳ್ಳೆಯದು ಇನ್ನು ಮುಂದಕ್ಕೆ ಅಂತಹ ಅಭಿಪ್ರಾಯವನ್ನು ಮಾಡಿದರೆ ಯಾವ ಮಸೀದಿಯ ಆಡಳಿತ ಸಮಿತಿಯು ಕೂಡ ತಿರಸ್ಕಾರ ಮಾಡುವುದಿಲ್ಲ. ಪ್ರತಿಯೊಂದು ಆಡಳಿತ ಸಮಿತಿಯು ಗೌರವ ಕೊಟ್ಟೆ ಕೊಡುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕುಂಡಡ್ಕ ಮಸೀದಿಯ ಆಡಳಿತ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಜಮಾತಿನ ಹಿರಿಯ ಸದಸ್ಯರು ಉಪಸ್ಥಿತರಿದ್ದರು.