
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿಸಿರುವುದಾಗಿ ಅನಾಮಿಕ ವ್ಯಕ್ತಿಯೋರ್ವರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಡ್ರೋನ್ ಮೂಲಕ ಜಿಪಿಅರ್ ಸ್ಕ್ಯಾನ್ ಗೆ ಸಿದ್ಧತೆ ನಡೆಸಿದ್ದಾರೆ.
ಸಾಮಾನ್ಯ GPR ಆಂಟೆನಾವನ್ನು ಡ್ರೋನ್ನ ಕೆಳಭಾಗದಲ್ಲಿ ಅಳವಡಿಸಿ 13ನೇ ಪಾಯಿಂಟ್ ನಲ್ಲಿ ಶೋಧ ನಡೆಯಲಿದೆ. ಡ್ರೋನ್ ಗಾಳಿಯಲ್ಲಿ ಹಾರುತ್ತಾ ನೆಲದ ಮೇಲ್ಮೈಗೆ ಸಮೀಪವಾಗಿ GPR ಸಿಗ್ನಲ್ ಕಳುಹಿಸುತ್ತದೆ.ಆ ಸಿಗ್ನಲ್ ನೆಲದೊಳಗೆ ಹೋಗಿ ಪ್ರತಿಫಲಿಸಿ ಮರಳಿ ಬರುತ್ತದೆ. ಅದನ್ನು ಸೆನ್ಸಾರ್ಗಳು ದಾಖಲಿಸಿ ನಿಖರ ಫಲಿತಾಂಶ ನೀಡುತ್ತದೆ. ನಂತರ ಡೇಟಾವನ್ನು ಸಾಫ್ಟ್ವೇರ್ ಮೂಲಕ 2D/3D ಚಿತ್ರವಾಗಿ ಪರಿವರ್ತನೆ ಮಾಡಲಾಗುತ್ತದೆ. ವೇಗವಾಗಿ ದೊಡ್ಡ ಪ್ರದೇಶ ಕವರ್ ಮಾಡಲು ಡ್ರೋನ್ ಜಿಪಿಅರ್ ಬಳಕೆ ಮಾಡಲಾಗುತ್ತಿದ್ದು ತಲುಪಲು ಕಷ್ಟವಾದ ನದಿ ದಂಡೆಯಿರುವ ಕಾರಣ ಡ್ರೋನ್ ಜಿಪಿಅರ್ ಬಳಸಲಾಗುತ್ತಿದೆ. ಅನಾಮಿಕ ದೂರುದಾರ ಮತ್ತು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅನುಪಸ್ಥಿತಿಯಲ್ಲಿ ಡ್ರೋನ್ ಮೂಲಕ ಶೋಧ ನಡೆಯಲಿದ್ದು ಕುರುಹು ಪತ್ತೆಯಾದರೆ ಅವರ ಉಪಸ್ಥಿತಿಯಲ್ಲಿ ಮುಂದಿನ ಕಾರ್ಯಾಚರಣೆ ನಡೆಯಲಿದೆ.