
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ SDM-ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ (HRD) ಕೇಂದ್ರವು “SAP-Software ಮೂಲಕ ಹಣಕಾಸು ಲೆಕ್ಕಪತ್ರ ನಿರ್ವಹಣೆ ಮತ್ತು ನಿಯಂತ್ರಣ” ಕುರಿತು 10 ದಿನಗಳ ವಿಶೇಷ ತರಬೇತಿ ಕಾರ್ಯಾಗಾರ ” ವನ್ನು ಆಯೋಜಿಸಿತು.
ಕಾರ್ಯಕ್ರಮ ಜು. 30ರಂದು ಪ್ರಾರಂಭವಾಗಿ ಆ. 9ರಂದು ಮುಕ್ತಾಯವಾಯಿತು. ತೃತೀಯ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 76 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು. ಬೆಂಗಳೂರಿನ ಆರ್ಯ-ಚಾಣಕ್ಯ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಈ ಸಂಸ್ಥೆಯ ಸಹಾಯಕ ನಿರ್ದೇಶಕ ಮತ್ತು ಹಣಕಾಸು ಲೆಕ್ಕಪತ್ರ ನಿರ್ವಹಣೆ ಮತ್ತು ನಿಯಂತ್ರಣದ ಸಲಹೆಗಾರ ಶ್ರೀ ನಾರಾಯಣ ಆರ್ ರವರು ಸಂಪನ್ಯೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮತ್ತು ಅವರು SAP-FICO (Systems, Applications & Products in Data Processing: Financial Accounting and Controlling) ತಂತ್ರಜ್ಞಾನ ಹಣಕಾಸು ನಿರ್ವಹಣಾ ಜ್ಞಾನ ಹೊಂದಿರುವವರಿಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಬ್ಯಾಂಕಿಂಗ್, ಉತ್ಪಾದನಾ, ಐಟಿ ಹಾಗೂ ಕಾನ್ಸಲ್ಟಿಂಗ್ ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿ ಆರ್ಥಿಕ ತಾಂತ್ರಿಕ ಸಲಹೆಗೆರರು, ವ್ಯಾವಹಾರಿಕ-ಹಣಕಾಸಿನ ವಿಶ್ಲೇಷಕರು, ಆರ್ಥಿಕ- ತಾಂತ್ರಿಕ ನಿರ್ವಾಹಕರು, ತರಬೇತುದಾರರು ಮತ್ತು ಹಣಕಾಸು ನಿರ್ವಹಣೆಯ ಸಲಹೆಗಾರರು ಇತ್ಯಾದಿ ಉದ್ಯೋಗಗಳ ಜೊತೆಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಅಪಾರ ಬೇಡಿಕೆ SAP-FICO ಸಲಹೆಗಾರರಿಗೆ ಇದೆ.
ತಾಂತ್ರಿಕ ಪ್ರಗತಿಯ ಹೊಸ ಯುಗವನ್ನು ನಿರೂಪಿಸುತ್ತಿದ್ದು, ಇವುಗಳನ್ನು ಆಧರಿಸಿದ ಭವಿಷ್ಯದ ಅವಕಾಶಗಳು ಅಪಾರವಾಗಿವೆ. SAP-FICO ತಂತ್ರಜ್ಞಾವು ವಿದ್ಯಾರ್ಥಿಗಳ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮತ್ತು ಪ್ರಾಯೋಗಿಕ ಕೌಶಲ್ಯ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ವಿನ್ಯಾಸಗೊಳಿಸಲಾದ ತರಬೇತಿಯಲ್ಲಿ ಸಮಗ್ರ ಆಧುನಿಕ ಕೈಗಾರಿಕೆಗಳಲ್ಲಿ ಬಳಸುವ ದತ್ತಾಂಶ ವಿಶ್ಲೇಷಣೆ ಮತ್ತು ವರದಿ ಮಾಡುವ ಸಾಧನಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅವರು ಮಾರ್ಗದರ್ಶನದಲ್ಲಿ SDM-ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ (HRD) ಕೇಂದ್ರವು ನಿರ್ದೇಶಕ ಡಾ. ನಾಗರಾಜ ಪೂಜಾರಿ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರದ ಸದಸ್ಯರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಸಹಕಾರ ನೀಡಿದರು.