
ಬೆಳ್ತಂಗಡಿ: ಖಾಸಗಿ ಬಸ್ಸು ನೌಕರರ ಸಂಘ ಬೆಳ್ತಂಗಡಿ- ಉಪ್ಪಿನಂಗಡಿ ವತಿಯಿಂದ ಶ್ರಮದಾನ ಮಾಡುವ ಮೂಲಕ ತೀರಾ ನಾದುರಸ್ಥಿಯಲ್ಲಿರುವ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳನ್ನು ತಾತ್ಕಾಲಿಕವಾಗಿ ನೀಡಿರುವ ದುರಸ್ತಿ ಮಾಡಲಾಯಿತು.
ಸಂಘದ ಅಧ್ಯಕ್ಷ ಸಿದ್ದೀಕ್ ಕೆಂಪಿ ಅವರ ನೇತ್ರತ್ವದಲ್ಲಿ ನಡೆದ ಈ ಶ್ರಮಾದಾನದಲ್ಲಿ ಜೆಸಿಬಿ ಯಂತ್ರದ ಮೂಲಕ ರಸ್ತೆ ಗುಂಡಿ ಹಾಗೂ ಏರುತಗ್ಗುಗಳನ್ನು ಸಮತಟ್ಟುಗೊಳಿಸಿ ತಾತ್ಕಾಲಿಕವಾಗಿ ಸರಾಗವಾಗಿ ಸಂಚರಿಸುವಂತೆ ಕ್ರಮವಹಿಸಲಾಯಿತು.
ಶ್ರಮದಾನದಲ್ಲಿ ಖಾಸಗಿ ಬಸ್ಸು ನೌಕರರ ಸಂಘದ ಪ್ರಮುಖರಾದ ಇಲ್ಯಾಸ್ ಕರಾಯ, ನಾರಾಯಣ, ಗಣೇಶ, ಜಯ, ಸಾದಿಕ್, ಕೆಎಸ್ ಅಬ್ದುಲ್ಲ, ಶಬೀರ್, ದಿನೇಶ್, ರಾಜೇಶ್, ಗಣೇಶ್ ಅಳಕೆ, ಬಾಬು, ಸತೀಶ್ ಕಾಮತ್, ಎಂ.ಕೆ. ಮಠ, ದಿನೇಶ್ ಮೊದಲಾದವರು ಕೈ ಜೋಡಿಸಿ ಸಾಮಾಜಿಕ ಬದ್ಧತೆ ಮೆರೆದರು. ಈ ತಂಡದ ಈ ಕಾರ್ಯವನ್ನು ಪ್ರಯಾಣಿಕರು ಕೊಂಡಾಡಿದರು.