
ಬೆಳ್ತಂಗಡಿ: ಶ್ರೀ ಗುರುನಾರಾಯಣ ಸಭಾಂಗಣದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಬಿಲ್ಲವ ಮಹಿಳಾ ವೇದಿಕೆಯ ನೇತೃತ್ವದಲ್ಲಿ, ಯುವ ಬಿಲ್ಲವ ವೇದಿಕೆಯ ಸಹಕಾರದಲ್ಲಿ ಆ. 8ರಂದು ಸಾಮೂಹಿಕ ವರಮಹಾಲಕ್ಷ್ಮೀ ವೃತಪೂಜೆ ರಘುನಾಥ ಶಾಂತಿ ಯವರ ಪೌರೋತ್ಯದಲ್ಲಿ ಜರಗಿತು.
ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್ ಕಲ್ಲಾಪು, ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ನಿತೀಶ್ ಎಚ್., ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಅಧ್ಯಕ್ಷೆ ಸುಮತಿ ಪ್ರಮೋದ್, ಕಾರ್ಯದರ್ಶಿ ಶಾಂಭವಿ ಪಿ. ಬಂಗೇರ, ಮಾಜಿ ಅಧ್ಯಕ್ಷರು ಗಳಾದ ವಿನೋದಿನಿ ರಾಮಪ್ಪ, ಪ್ರೇಮಾ ಉಮೇಶ್, ರಾಜಶ್ರೀ ರಮಣ್, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್, ಸಂಘದ ನಿರ್ದೇಶಕರು, ಮಹಿಳಾ ಬಿಲ್ಲವ ವೇದಿಕೆ ಸದಸ್ಯರು
ಮಹಿಳಾ ವೃತದಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.