
ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ತಾಲ್ಲೂಕು ದಕ್ಷಿಣ ಕನ್ನಡ ಹಾಗೂ ಸೈಂಟ್ ಇನ್ನೇಷಿಯಸ್ ಶಾಲೆ ಪಾಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ತಾಲ್ಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ 17 ವರ್ಷದ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
14ರ ವಿಭಾಗದ ಹಾಗೂ 17 ರ ವಿಭಾಗದ ಬಾಲಕರ ಹಾಗೂ ಬಾಲಕಿಯರ ಪಂದ್ಯಾಟಗಳಲ್ಲಿ ಒಟ್ಟು ಆರು ಚಿನ್ನ, ಎಂಟು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳನ್ನು ಗಳಿಸಿ ವಿಷೇಶ ಸಾಧನೆಯನ್ನು ಗೈದ ಮಕ್ಕಳನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಅವರು ಅಭಿನಂದಿಸಿದ್ದಾರೆ.
ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಭಾಂದವಿ ಸಿ., ಸೌಜನ್ಯ ಪಿ. ಶೇಷಪ್ಪನವರ್, ಎಮ್. ಜಿ. ದೃತಿ ಪಟೇಲ್, ದೀಕ್ಷಿತ್ ಬಿ.ಎನ್., ಜಯಂತ್ ಗೌಡ, ಶ್ರೇಯಸ್ ಸಿ. ಲಿಂಗರಾಜು ಮತ್ತು ವಿ. ಅಕುಲ್ ಸಾಯಿ ಆಯ್ಕೆಗೊಂಡಿದ್ದಾರೆ.