
ಧರ್ಮಸ್ಥಳ: ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮತ್ತು 16(A)ನೇ ಗುರುತಿನಲ್ಲಿ ಪತ್ತೆಯಾಗದ ಅವಶೇಷ. ಧರ್ಮಸ್ಥಳದ ಬಾಹುಬಲಿ ಬೆಟ್ಟದ ಸಮೀಪದಲ್ಲಿ ಸ್ಥಳವನ್ನು ಗುರುತಿಸಿ, ಆ.9ರಂದು ಗುರುತಿಸಿದ 16ನೇ ಸ್ಥಳದಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. ನಂತರ ಅಲ್ಲಿಯೇ ಸಮೀಪ 16(A) ಗುರುತಿನ ಉತ್ಖನನ ಕಾರ್ಯಚರಣೆ ಮುಂದುವರಿಸಿದ್ದು, ಜೆಸಿಬಿ ಯಂತ್ರದ ಮೂಲಕ ನಡೆಸಲಾಯಿತು. ಇದೀಗ ಯಾವುದೇ ಕಳೇಬರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇಂದಿನ ಉತ್ಖನನ ಕಾರ್ಯಾಚರಣೆ ಅಂತ್ಯಗೊಂಡಿದೆ.