
ಕಲ್ಲೇರಿ: ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಆ.9 ರಂದು ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು ಅಧ್ಯಕ್ಷತೆಯಲ್ಲಿ ಸಂಘದ ರೈತ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷ ಜಯಾನಂದ ಕಲ್ಲಾಪು ಮಾತನಾಡಿ ಸಂಘದ ಸದಸ್ಯರಿಗೆ 12% ಡಿವಿಡೆಂಡ್ ಘೋಷಿಸಲಾಗಿದೆ.ಸಾಲ ವಸೂಲಿ ಶೇ. 100 ಆಗಿವೆ ಅಲ್ಲದೆ ಕಳೆದ 24 ವರ್ಷಗಳಿಂದ ಸತತವಾಗಿ ಲೆಕ್ಕ ಪರಿಶೋಧನೆ ಯಲ್ಲಿ ‘ಎ’ ಗ್ರೇಡ್ ಪಡೆದಿರುವುದು ಅಲ್ಲದೆ ಸತತ 25 ವರ್ಷಗಳಿಂದ ಲಾಭದಲ್ಲಿ ನಡೆಯುತ್ತಿದೆ. ಈ ಸಾಧನೆಗೆ ಸದಸ್ಯರುಗಳ, ನಿರ್ದೇಶಕರುಗಳ ಸಹಕಾರ ಹಾಗೂ ಮಾರ್ಗದರ್ಶನ ಅಲ್ಲದೆ ನಮ್ಮ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಕಾರಣ ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷ ಸುನೀಲ್ ಅಣಾವು, ನಿರ್ದೇಶಕ ಜಗದೀಶ್ ಶೆಟ್ಟಿ ಮೈರ, ಕೃಷ್ಣಪ್ಪ ಗೌಡ, ರೋಹಿತ್ ಶೆಟ್ಟಿ, ಸಾಮ್ರಾಟ್, ಸರೋಜಿನಿ, ರಜನಿನಾಥ್, ಸುರೇಶ್, ಶ್ರೀನಿವಾಸ್ ,ಜಯವಿಕ್ರಮ್ ಕಲ್ಲಾಪು, ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ: ಡಾ.ಯು.ಪಿ.ರತ್ನಾಕರ ರಾವ್, ಅಶೋಕ್ ಕುಮಾರ್ ಮೂಂಡೂರು, ಅಜಿತ್ ಕುಮಾರ್ ಕೆ. ಎನ್., ನಾರಾಯಣ ಗೌಡ ಉರುವಾಲು, ವಿಜಯ, ಇಸುಬು, ಅವ್ವ ಬಿ., ಬೇಬಿ ಪಿ.ವರ್ಗಿಸ್, ವೀರಪ್ಪ ಗೌಡ, ಲಕ್ಷ್ಮಣ್ ನಾಯ್ಕ್ ಹಲೇಜಿ, ನೇತ್ರಾವತಿ, ಬೋಮ್ಮಯ್ಯ ಬಂಗೇರ, ಡಾ.ವೈಷ್ಣವಿ ಕೆ.ವಿ., ಅಚ್ಚುತ ಆಚಾರ್ಯ, ಮೋಹಿನಿ, ಜನಾರ್ದನ ಗೌಡ ನಾಕಾಲು, ಶಂಕರ್ ನಾರಾಯಣ್ ಭಟ್ ಮತ್ತು ಡೀಕಯ್ಯ ಗೌಡ ಸನ್ಮಾನಿಸಲಾಯಿತು. ಸಂಘದ ವ್ಯಾಪ್ತಿಯ ಉರುವಾಲು, ತಣ್ಣೀರುಪಂತ, ಕರಾಯ ಗ್ರಾಮಗಳಲ್ಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉನ್ನತ ಮಟ್ಟದಲ್ಲಿ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಅಧ್ಯಕ್ಷ ಜಯಾನಂದ ಕಲ್ಲಾಪು ಸ್ವಾಗತಿಸಿ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿರೂಪಿಸಿದರು, ನಿರ್ದೇಶಕಿ ಜಯಂತಿ ಪಾಲೇದು ವಂದಿಸಿದರು.