
ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ 2025 ನೇ ಸಾಲಿನಲ್ಲಿ ನಡೆಯಲಿರುವ ಈದ್ ಮಿಲಾದ್ ಕಾರ್ಯಕ್ರಮದ ಜಮಾಅತ್ ಸಭೆಯು ಖತೀಬರಾದ ಎಫ್. ಎಚ್. ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಅವರ ನೇತೃತ್ವದಲ್ಲಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಪೆಲತ್ತಲಿಕೆ ಅವರ ಅಧ್ಯಕ್ಷತೆಯಲ್ಲಿ ಜಮಾಅತರ ಉಪಸ್ಥಿತಿಯಲ್ಲಿ 2025ನೇ ಸಾಲಿನ ಈದ್ ಮೀಲಾದ್ ಕಾರ್ಯಕ್ರಮವನ್ನು ಆಚರಿಸುವರೇ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಜಿ.ಡಿ. ಅಶ್ರಫ್ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಶರೀಫ್ ಜಿ. ಕೋಶಾಧಿಕಾರಿಯಾಗಿ ಇರ್ಫಾನ್ ಎಸ್., ಉಪಾದ್ಯಕ್ಷರುಗಳಾಗಿ ಬಿ.ಐ. ಮಹಮ್ಮದ್ ಹನೀಫ್, ಕೆ.ಪಿ. ರಫೀಕ್, ಜತೆ ಕಾರ್ಯದರ್ಶಿಗಳಾಗಿ ಸೈಪುಲ್ಲ ಎಚ್.ಎಸ್., ಫಯಾಝುದ್ದೀನ್ ಕೆ.ಎಂ. ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಖತೀಬ್ ಮಹಮ್ಮದ್ ಮಿಸ್‌ಬಾಹಿ, ಹಾಜಿ ಅಬೂಬಕ್ಕರ್, ಸದರ್ ಅಬೂಬಕ್ಕರ್ ಸಿದ್ದೀಕ್ ಮುಈನಿ, ಅಬ್ದುಲ್ಲ ಕುಂಙ ದಾರಿಮಿ, ಪಿ.ಎಸ್. ಮಹಮ್ಮದ್ ಮದನಿ, ಮಹಮ್ಮದ್ ಹನೀಫ್ ಮಿಸ್ಬಾಹಿ, ಅಬ್ದುಲ್ ಕರೀಮ್ ಗೇರುಕಟ್ಟೆ ಹಾಗೂ ಸದಸ್ಯರುಗಳಾಗಿ ಹಮೀದ್ ಜಿ.ಡಿ., ಮನ್ಸೂರ್ ಜಿ., ಸಾಹುಲ್ ಹಮೀದ್ ಮುಳ್ಳ ಗುಡ್ಡೆ, ಸಿದ್ದೀಕ್ ಜಿ.ಎಚ್., ನೌಷದ್ ಗೇರುಕಟ್ಟೆ, ಮುಸ್ತಫ ಬಟ್ಟೆಮಾರು, ಅಶ್ರಫ್ ಪದಗೋಳಿ, ಅಶ್ರಫ್ ಬಟ್ಟೆಮಾರು, ಉಮ್ಮರ್ ಜಿ.ಎ., ಹನೀಫ್ ಕೆ.ಎಂ. ಆಯ್ಕೆಯಾದರು.