ಮುಂಡಾಜೆ: ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ಲೇಸ್ ಕಾರ್ಯಕ್ರಮ

0

ಮುಂಡಾಜೆ: ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.1ರಂದು ಆಟಿಡೊಂಜಿ ಲೇಸ್ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಮುಂಡಾಜೆ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ವಸಂತಿ ಅವರು ಉದ್ಘಾಟಿಸಿ ಮಾತನಾಡಿದರು. ಆಟಿ ತಿಂಗಳಲ್ಲಿ ತಿನ್ನುವ ವಿಶಿಷ್ಟ ತಿಂಡಿ ತಿನಸುಗಳ ಮಹತ್ವ ಹಾಗೂ ಅದಕ್ಕಿರುವ ಸಾಂಪ್ರದಾಯಿಕ ಹಿನ್ನಲೆ ಮತ್ತು ಆಟಿ ತಿಂಗಳ ಆಚರಣೆಗಳ ಬಗ್ಗೆ ಬಹಳ ಚೆನ್ನಾಗಿ ವರ್ಣಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಕಾರ ವಿಭಾಗದ ಭಗಿನಿ ಮೀನಾಕ್ಷಿ ಅವರು ಆಟಿ ತಿಂಗಳ ಆಚರಣೆಯನ್ನು ನೆನಪಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷರಾದ ಶಾಲಾ ಮುಖ್ಯಪಾಧ್ಯಾಯಿನಿ ಚಂದ್ರಮತಿ ಹಿಂದಿನ ಆಟಿ ತಿಂಗಳ ಕಷ್ಟಗಳನ್ನು ಹಂಚಿಕೊಂಡರು. ಹಿರಿಯ ಶಿಕ್ಷಕಿ ಶ್ರೀಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರೇವತಿ ಮಾತಾಜಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಾದ ಯಜ್ಞ, ರಶ್ಮಿತಾ, ಹಾಗೂ ಶ್ರಾವ್ಯ ನಡೆಸಿಕೊಟ್ಟರು. ಪೋಷಕರು ಆಟಿ ತಿಂಗಳ ಹಲವಾರು ಬಗೆಯ ತಿಂಡಿಗಳನ್ನು ಕಳುಹಿಸಿಕೊಟ್ಟು ಪ್ರೋತ್ಸಾಹಿಸಿದರು.

LEAVE A REPLY

Please enter your comment!
Please enter your name here