
ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲ ಘಟಕ ಮತ್ತು ನಾಡೋಳಿ ದಯಾಗ್ನಸ್ಟಿಕ್ ಸೆಂಟರ್ ಕಡಬ ಇದರ ಆಶ್ರಯದಲ್ಲಿ “ಆರೋಗ್ಯ ಅರಿವು 2025” ಎಂಬ ಹೆಸರಿನಲ್ಲಿ ರಕ್ತ ವರ್ಗಿಕರಣ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸಂತಾ ಜಾನರ ಹಿ. ಪ್ರಾ ಶಾಲೆ ಕೊಕ್ಕಡದಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದವರು ಕೊಕ್ಕಡದ ವಕೀಲರು ಮತ್ತು ದಸ್ತವೇಜು ಬರಹಗಾರರಾದ ಧನ್ಯ ಕೇವಳ ಹಾಗೂ ಉದ್ಘಾಟಕರ ಭಾಷಣದಲ್ಲಿ ಅವರು ಅರೋಗ್ಯ ಮತ್ತು ರಕ್ತದಾನದ ಮಹತ್ವ ತಿಳಿಸಿದರು.
ಅತಿಥಿಯಾಗಿರುವ ನಾಡೋಳಿ ದಯಾಗ್ನಸ್ಟಿಕ ಸೆಂಟರ್ನ ಆಡಳಿತ ಮಂಡಳಿಯ ನಿರ್ದೇಶಕರಾದ JFD ಕಾಶೀನಾಥ್ ಅವರು ರಕ್ತದಾನದ ಮಹತ್ವ, ರಕ್ತ ವರ್ಗಿಕರಣದ ಬಗ್ಗೆ ಮತ್ತು ಜೆಸಿಯ ಉದ್ದೇಶವನ್ನು ವಿವರಿಸಿದರು.

ಮುಖ್ಯ ಅತಿಥಿಯಾಗಿರುವ ಜೇನವಿವ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಆರೋಗ್ಯ ಅರಿವು 2025 ಕಾರ್ಯಕ್ರಮದ ಅಡಿಯಲ್ಲಿ ಹಲವು ಸ್ಪರ್ಧೆಯನ್ನು ಆಯೋಜಿಸಿ, ಸ್ಪರ್ಧೆಯಲ್ಲಿ ವಿಜೇತರದವರಿಗೆ ಬಹುಮಾನ ವಿತರಿಸಲಾಯಿತು. ತದನಂತರ ಎಲ್ಲಾ ಮಕ್ಕಳ ರಕ್ತ ವರ್ಗಿಕರಣ ಮಾಡಿ ರಕ್ತ ಗುಂಪನ್ನು ಹೇಳಲಾಯಿತು. ಕಾರ್ಯಕ್ರಮದ ಪ್ರಯೋಜಕರಾದ HGF ಜೆಸಿಂತಾ ಡೆಸೋಜಾ ಉದ್ಘಾಟಕರ ಪರಿಚಯವನ್ನು ವಾಚಿಸಿದರು ಹಾಗೂ ಶಾಲೆಗೆ ನೆನಪಿನ ಕಿಟ್ಟನ್ನು ನೀಡಿದರು.

JC ಧನುಷ್ ಮತ್ತು HGF ಜೇಸಿಂತಾ ಡೆಸೋಜಾ ಕಾರ್ಯಕ್ರಮದ ಕುರಿತು ಅನಿಸಿಕೆ ಹೇಳಿದರು. ಮಾರ್ಗದರ್ಶಕರಾದ HGF ಜೋಸೆಫ್ ಪಿರೇರಾ, ಪೂರ್ವಧ್ಯಕ್ಷರಾದ JFM ಶ್ರೀದರ್ ರಾವ್, ನಿಕಟಪೂರ್ವ ಅಧ್ಯಕ್ಷರಾದ ಸಂತೋಷ ಜೈನ್, ಕಾರ್ಯಕ್ರಮದ ನಿರ್ದೇಶಕರಾದ JC ವಿಕ್ಟರ್, JC ದೀಪಾ, JC ಆಯುಷ್ ಜೈನ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ನಾಡೋಳಿ ದಯಾಗ್ನಸ್ಟಿಕ ಸೆಂಟರ್ ಉದ್ಯೋಗಗೀಗಳಾದ ತೃಪ್ತಿ ಮತ್ತು ರೂಪರ್ಷಿ ಉಪಸ್ಥಿತರಿದ್ದರು.
ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜೆಸಿಐ ಕುಟುಂಬದ ಎಲ್ಲ ಸದಸ್ಯರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕ್ರಮದ ಉದ್ದೇಶಕ್ಕೆ ಸಾಥ್ ನೀಡಿದರು. ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷರಾದ HGF ಶೋಭಾ ಪಿb ಸ್ವಾಗತಿದರು. JC ವಾಣಿಯನ್ನು JC ಜೋಯೆಲ್ ಪೀರೆರಾ ವಾಚಿಸಿ ಸಭೆಯನ್ನು ಕಾರ್ಯದರ್ಶಿ ಯಾದ ಚಂದನಾ ಜೈನ್ ವಂದಿಸಿದರು.