ಕಾಶಿಪಟ್ಣ: ದಾರುನ್ನೂರ್ ಸಂಸ್ಥೆಯಲ್ಲಿ ಪ್ರಾಥಮಿಕ ಶಾಲಾ ವಲಯ ಮಟ್ಟದ ಶೆಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ

0

ಬೆಳ್ತಂಗಡಿ; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ದಾರುನ್ನೂರು ಎಜುಕೇಶನ್ ಸೆಂಟರ್ ಕಾಶಿಪಟ್ಣದಲ್ಲಿ ಆಯೋಜಿಸಿದ್ದ ಬಜಿರೆ, ನಿಟ್ಟಡೆ ಮತ್ತು ಪಡ್ಡಂದಡ್ಕ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ದಾರುನ್ನೂರು ಕಾಶಿಪಟ್ಣ ಸಂಸ್ಥೆಯ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ನಿರ್ವಹಿಸಿದರು. ಸಂಸ್ಥೆಯ ಸದರ್ ಮುದರ್ರಿಸ್ ಹುಸೇನ್ ರಹ್ಮಾನಿ ಅಧ್ಯಕ್ಷತೆ ವಹಿಸಿದ್ದರು. ನಿಟ್ಟಡೆ ಮತ್ತು ಪಡ್ಡಂದಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಆರತಿ, ವಲಯ ನೋಡಲ್ ಅಧಿಕಾರಿ ಪುಷ್ಪಾ , ಸಂಸ್ಥೆಯ ಪ್ರಾಂಶುಪಾಲ ರಶೀದ್ ಹುದವಿ ಮೂಡಿಗೆರೆ, ದ.ಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ; ಸಂಸ್ಥೆಯಲ್ಲಿ ನಡೆದ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ದಾರುನ್ನೂರು ಕಾಶಿಪಟ್ಣ ಬಾಲಕಿಯರ ವಿಭಾಗದಲ್ಲಿ ನವಚೇತನಾ ವೇಣೂರು ಚಾಂಪಿಯನ್ ಮತ್ತು ರನ್ನರ್ ಅಪ್ ಗಳಾಗಿ, ಕ್ರಮವಾಗಿ ವಿದ್ಯೋದಯ ವೇಣೂರು ಮತ್ತು ಸ.ಉ.ಪ್ರಾ ಶಾಲೆ ಹೊಕ್ಕಾಡಿಗೋಳಿ ಸ್ಥಾನಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಕಾಶಿಪಟ್ಣ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಲತಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಫಕೀರಬ್ಬ ಮಾಸ್ಟರ್‌ ಮರೋಡಿ, ಸಮೂಹ ಸಂಪನ್ಮೂಲ ವ್ಯಕ್ತಿ ಆರತಿ, ಸಂಸ್ಥೆಯ ಉಪ ಪ್ರಾಂಶುಪಾಲ ಶಮೀಮ್ ಹುದವಿ ತುಂಬೆ, ಮುಖ್ಯೋಪಾಧ್ಯಾಯ ಮುಹಮ್ಮದ್ ಅನ್ವರ್ ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕ ಅಬ್ದುಲ್ ಹಕೀಂ ಸ್ವಾಗತಿಸಿ ಸಹ ಶಿಕ್ಷಕ ಮುಹಮ್ಮದ್ ನೌಶಾದ್ ಕಾರ್ಯಕ್ರಮ ನಿರ್ವಹಿಸಿದರು.

ವಿಜೇತರಿಗೆ ಪ್ರಶಸ್ತಿ ಫಲಕ ,ಪ್ರಶಸ್ತಿ ಪತ್ರ ಮತ್ತು ಟ್ರೋಫಿಯನ್ನು ವಿತರಿಸಿ ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಮುಹಮ್ಮದ್ ಅನ್ವರ್ ಸ್ವಾಗತಿಸಿ ಸಹಶಿಕ್ಷಕ ಮುಹಮ್ಮದ್ ಅಕ್ರಂ ವಂದಿಸಿದರು.

LEAVE A REPLY

Please enter your comment!
Please enter your name here