
ಬೆಳ್ತಂಗಡಿ: ಬೆಳ್ತಂಗಡಿ ಎಸ್.ಐ.ಟಿ ಕಚೇರಿಯಲ್ಲಿ ಮಹತ್ವದ ಮೀಟಿಂಗ್ ಆರಂಭಗೊಂಡಿದೆ. ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಮೀಟಿಂಗ್ ನಡೆದಿದ್ದು, ಇದೀಗ ಎಸ್.ಐ.ಟಿ ಅಧಿಕಾರಿಗಳು, ಮುಸುಕುಧಾರಿ ಸಹಿತ ಸ್ನಾನಘಟ್ಟದತ್ತ ಹೊರಟಿದ್ದಾರೆ.
ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಕಾರಿನಲ್ಲೇ ಕುಳಿತು ಕಾದ ಮುಸುಕುಧಾರಿ ದೂರುದಾರ ಹಾಗೂ ವಕೀಲರು, ಇದೀಗ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದತ್ತ ತೆರಳಿದ್ದಾರೆ.