ಆ. 10-12:ಬೆಳ್ತಂಗಡಿ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಿಂದ 354ನೇ ಆರಾಧನಾ ಮಹೋತ್ಸವ

0

ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾಪನಾ ವತಿಯಿಂದ ಗುರುರಾಯರ 354ನೇ ಆರಾಧನಾ ಮಹೋತ್ಸವ ಆ. 10ರಿಂದ 12ರ ವರೆಗೆ ವಿವಿಧ ವೈದಿಕ, ಸಾಂಸ್ಕೃಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಆ. 10ರಂದು ಬೆಳಿಗ್ಗೆ ಆರಾಧನಾ ಮಹೋತ್ಸವದ ಉದ್ಘಾಟನೆ ದೀಪ ಪ್ರಜ್ವಲನೆ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಿ. ಬಲಿಪ, ಬೆಳ್ತಂಗಡಿ ಪೊಲೀಸ್ ನಿರೀಕ್ಷಕ ಬಿ. ಜೆ. ಸುಬ್ಬಪುರ ಮಠ, ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಜ್ ಪ್ರಸಾದ್ ಬೊಳ್ನಾಯ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಜಗನ್ನಾಥ್ ಭಾಗವಹಿಸಲಿದ್ದಾರೆ. ನಂತರ ಕನ್ಯಾಡಿ ಸ್ವರ ತ್ರಿವೇಣಿ ತಂಡ ದವರಿಂದ ಭಕ್ತಿ ರಸ ಮಂಜರಿ ನಡೆಯಲಿದೆ.

ಆ. 11ರಂದು ನೂತನವಾಗಿ ನಿರ್ಮಿತವಾದ ಶ್ರೀ ಗುರುಪ್ರಸಾದ ಮಂಟಪದ ಉದ್ಘಾಟನಾ ಸಮಾರಂಭ ನಡೆಯಲಿದೆ. ಹೊಸಪೇಟೆ ಶಾಸಕ ಎಚ್. ಆರ್. ಗವಿಯಪ್ಪ ಉದ್ಘಾಟಿಸಲಿದ್ದಾರೆ. ಗಂಗಾವತಿ ಮಾಜಿ ಶಾಸಕ ಎಚ್.ಎಸ್. ಮುರಳೀಧರ್, ಎಕ್ಷಲ್ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್,
ನಾರಾಯಣ ಬೇಗೂರು, ಸುಜಿತಾ ವಿ. ಬಂಗೇರ, ಪ್ರಸಾದ್ ಶೆಟ್ಟಿ ಏನಿಂಜೆ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಘವೇಂದ್ರ ಪ್ರತಿಷ್ಠಾಪನಾದ ಅಧ್ಯಕ್ಷ ಪೀತಾಂಬರ ಹೇರಾಜೆ ವಹಿಸಲಿದ್ದಾರೆ.
ಆ. 11ರಂದು ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ.

LEAVE A REPLY

Please enter your comment!
Please enter your name here