
ತೋಟತ್ತಾಡಿ: ಆ.5ರಂದು ಸಂಜೆ ಸುರಿದ ಭಾರಿ ಮಳೆಗೆ ದಡ್ದು ಸಮೀಪ ತೋಡಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಬಂದು ಕಾರು ಮುಳುಗಡೆಯಾಗಿರುವ ಘಟನೆ ನಡೆದಿದೆ.
ದಡ್ದು ಎಂಬಲ್ಲಿ ತೋಡಿಗೆ ಕಾಲುಸಂಕ ಇದ್ದು ಮಳೆಗಾಲದಲ್ಲಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ತಮ್ಮ ತಮ್ಮ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಜೋರಾದ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದು ಕಾಲುಸಂಕ ಮುಳುಗಡೆಯಾಗಿದೆ.
ಕಕ್ಕಿಂಜೆ ನಿವಾಸಿ ಅಶ್ರಫ್ ತೋಟದಲ್ಲಿ ಕಾರು ನಿಲ್ಲಿಸಿ ಕಾಲುಸಂಕದ ಮೂಲಕ ಮನೆಗೆ ತೆರಳಿದ್ದರು. ಈ ನಡುವೆ ಸಂಜೆ ಸುರಿದ ಬಾರಿ ಮಳೆಗೆ ಅಶ್ರಫ್ ಕಕ್ಕಿಂಜೆ ಮನೆಗೆ ಹೋದ ಸಂದರ್ಭದಲ್ಲಿ ತೋಡಿನಲ್ಲಿ ದಿಡೀರ್ ನೀರು ಬಂದು ತೋಟಕ್ಕೆ ನೀರು ನುಗ್ಗಿ ಕಾರು ಮುಳುಗಡೆಯಾಗಿದೆ.
ನಂತರ ಹಗ್ಗದ ಸಹಾಯದಿಂದ ಕಾರನ್ನು ಸ್ಥಳೀಯರ ಸಹಾಯದಿಂದ ಮೇಲೆ ಎತ್ತಾಲಾಯಿತು ಎಂದು ಸುದ್ದಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.