
ಶಿಶಿಲ: ಆ. 5ರಂದು ಸಾಯಂಕಾಲ 4ಗಂಟೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಶಿಶಿಲ ಗ್ರಾಮದ ಮುಚ್ಚಿರಡ್ಕ ನಿವಾಸಿ ಕೃಷ್ಣಪ್ಪ ಗೌಡ ಅವರ ಮನೆಯ ಹಿಂಬದಿಯ ಗುಡ್ಡ ಕುಸಿದಿದ್ದು ಮನೆಗೆ ತಾಗಿಕೊಂಡಂತೆ ಮಣ್ಣಿನ ರಾಶಿ ಬಿದ್ದಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಸುಧೀನ್ ಡಿ., ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ಘಟಕದ ಸದಸ್ಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.