
ಬೆಳ್ತಂಗಡಿ: ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ದ್ವಿಚಕ್ರ ವಾಹನ ಸವಾರನೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಧರ್ಮಸ್ಥಳ ಘಟಕದಲ್ಲಿ ಸಂಚಾರ ನಿಯಂತ್ರಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ, ಲಾಯಿಲ ಗ್ರಾಮದ ನಿವಾಸಿ ಪಿ. ದಾವೂದ್ (54) ಎಂಬವರು ದೂರು ನೀಡಿದ್ದು ಆ.5ರಂದು ಮಧ್ಯಾಹ್ನ ಧರ್ಮಸ್ಥಳ ಡಿಪ್ಪೊದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎ-21ಎಫ್-0103 ನೇ ಸರಕಾರಿ ಬಸ್, ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್ ಬಳಿ ತಲುಪಿದಾಗ, ಎದುರಿನಿಂದ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಬಂದ ಸವಾರನೋರ್ವ ಬಸ್ಸಿನ ಮುಂಬಾಗದ ಗ್ಲಾಸಿಗೆ ಕಲ್ಲು ಹೊಡೆದು ಹೋಗಿದ್ದಾನೆ.
ಈ ಕೃತ್ಯದಿಂದ ಸುಮಾರು 15,000/- ರೂ ನಷ್ಟವನ್ನುಂಟಾಗಿದೆ ಎಂದು ನೀಡಿರುವ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.