
ಶಿಶಿಲ: ಆ.5ರಂದು ಸಾಯಂಕಾಲ 4ಗಂಟೆಯಿಂದ ಸುರಿಯುತ್ತಿರುವ ರಣ ಭೀಕರ ಮಳೆಗೆ ಶಿಶಿಲದ ಗುತ್ತು, ಪೇರಿಕೆ, ಅಮ್ಮುಡಂಗೆ, ಬದ್ರಿಜಾಲು ಸಂಪರ್ಕ ಉಕ್ಕಿ ಹರಿಯುತ್ತಿರುವ ನೀರಿನಿಂದಾಗಿ ಸಂಪರ್ಕ ಕಡಿತ ಗೊಂಡಿದೆ. ಜನರು ತಮ್ಮ ತಮ್ಮ ಮನೆಗಳಿಗೆ ತೆರಳಲು ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದಲ್ಲದೆ ದೇವಾಲಯದ ಒಳಗಡೆಯು ನೀರು ನುಗ್ಗಿದ್ದು ಪಂಚಾಯತ್ ಅಧ್ಯಕ್ಷ ಸುಧೀನ್ ಡಿ. ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.