
ಅಳದಂಗಡಿ: ಆಮಂತ್ರಣ ಸೇವಾ ಪ್ರತಿಷ್ಠಾನ ಸಾರಥ್ಯದಲ್ಲಿ, ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಯೋಗದೊಂದಿಗೆ ತುಳುನಾಡು ಒಕ್ಕೂಟ ಬೋಳ್ತೇರ್, ಲಯನ್ಸ್ ಕ್ಲಬ್ ಸುಲ್ಕೇರಿ, ಶಿವನಾಗ ಫ್ರೆಂಡ್ಸ್ ಕುದ್ಯಾಡಿ, ಸದ್ಧರ್ಮ ಯುವಕ ಮಂಡಲ ಕುದ್ಯಾಡಿ ಮತ್ತು ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಇವರ ಸಹಕಾರದಲ್ಲಿ
ತುಳು ಸಿಂಗಾರ ಮತ್ತು ಚೆನ್ನೆಮಣೆ ಸ್ಪರ್ಧೆ ಆ. 3ರಂದು ಅಳದಂಗಡಿ ಕೆದ್ದು ದೀಪಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತುಳು ಸಂಪ್ರದಾಯದಂತೆ ವಿಶೇಷವಾಗಿ ಅಳದಂಗಡಿ ಶ್ರೀ ಕ್ಲಿನಿಕ್ ನ ವೈದ್ಯ ಡಾ.ಎನ್.ಎಂ.ತುಳುಪುಳೆ ನೆರವೇರಿಸಿದರು. ಚೆನ್ನೆಮಣೆ ಸ್ಪರ್ಧೆಯ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಮುರಳಿ ಬಲಿಪ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆಮಂತ್ರಣ ಸೇವಾ ಪ್ರತಿಷ್ಠಾನ ಗೌರವಾಧ್ಯಕ್ಷ ಶಿವಪ್ರಸಾದ್ ಅಜಿಲರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ., ಅಳದಂಗಡಿ ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ, ಉಜಿರೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪಿ.ಹೆಚ್.ಪ್ರಕಾಶ್ ಶೆಟ್ಟಿ ನೊಚ್ಚ, ಅಳದಂಗಡಿ ಪ್ರಾ.ಕೃ.ಪತ್ತಿನ ಅಧ್ಯಕ್ಷ ರಾಕೇಶ್ ಹೆಗ್ಡೆ, ಉದ್ಯಮಿಗಳಾದ ಲ|ನಿತ್ಯಾನಂದ ಎನ್. ಯೋಗಕ್ಷೇಮ ನಾವರ, ಕರಂಬಾರು ಗುತ್ತು ಪ್ರಸನ್ನ ಹೆಗ್ಡೆ,ಅಳದಂಗಡಿ ವಲಯ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವೀಚಾರಕಿ ಯಶೋಧ, ತುಳು ಸಂಧಿ ಪಾಡ್ದನ ಪರಿಣಿತರಾದ ಕರ್ಗಿ ಯಾನೆ ಶಾರದ ಶೆಟ್ಟಿ ಅಳದಂಗಡಿ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವೀರೇಂದ್ರ ಕುಮಾರ್ ಜೈನ್ ನಾವರ, ಸುಲ್ಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ|ಪ್ರಶಾಂತ್ ಶೆಟ್ಟಿ ಬೊಳ್ಳಿಮಾರ್, ಉಪಸ್ಥಿತರಿದ್ದರು.
ನಿವೃತ್ತಿ ಹೊಂದಿದ ಶಿಕ್ಷಕಿ ಸರೋಜ ಇವರಿಗೆ ಸನ್ಮಾನ ಮಾಡಲಾಯಿತು.
ಬಡಗಕಾರಂದೂರು ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಹನ್ನೊಂದು ವರ್ಷಗಳ ಕಾಲ ಸೇವೆ ಹಾಗೂ ವೃತ್ತಿ ಜೀವನದ ಶಿಕ್ಷಕರ ನಿವೃತ್ತಿಗೆ ಆಮಂತ್ರಣ ಪ್ರತಿಷ್ಠಾನದ ವತಿಯಿಂದ ಗೌರವ ಸನ್ಮಾನ ನೆರವೇರಿಸಲಾಯಿತು. ಅದೇ ರೀತಿ ಅಳದಂಗಡಿ ಪರಿಸರದಲ್ಲಿ ಕಲಾ ಸರಸ್ವತಿ ನಾಟ್ಯ ಕೇಂದ್ರವನ್ನು ಪ್ರಾರಂಭಿಸಿ ಹಲವಾರು ಮಕ್ಕಳಿಗೆ ನೃತ್ಯ ಕಲಿಸಿದ ಗುರುಗಳಾದ ಆತ್ಮ ಕಮಲೇಶ್ ಅವರನ್ನು ಗೌರವಿಸಲಾಯಿತು.
ತುಳು ಒಕ್ಕೂಟ ತಾಲೂಕು ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಹರೀಶ್ ವೈ.ಚಂದ್ರಮ, ಮಾಜಿ ಗ್ರಾ.ಪಂ.ಅಧ್ಯಕ್ಷೆ ಹರಿಣಾಕ್ಷಿ.ಕೆ.ಶೆಟ್ಟಿ, ಬಂಟ್ವಾಳ ಆಮಂತ್ರಣ ವೇದಿಕೆ ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಶಿಕ್ಷಕಿ ಸರ್ವಾಣಿ, ಐಸಿರಿ ಆರ್ಟ್ಸ್ ದರ್ಶನ್ ಶೆಟ್ಟಿ, ಶಿವಕುಲಾಲ್, ವಿಕಾಸ್ ಜೈನ್,ಯಕ್ಷಗಾನ ಗುರು ಪ್ರಭಾಕರ ಶೆಟ್ಟಿ, ಸೇವಾ ಪ್ರತಿನಿಧಿ ಶುಭಲತ ರೈ, ಶಾರದಾ ಶೆಟ್ಟಿ ಅರುವ ಭಾಗವಹಿಸಿದ್ದರು.
ತುಳು ಸಿಂಗಾರ ಕಾರ್ಯಕ್ರಮದಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ದೆ, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯವರಿಂದ ಕುಣಿತಾ ಭಜನೆ, ಅಳದಂಗಡಿ ಕಲಾ ಸರಸ್ವತಿ ತಂಡದಿಂದ ತುಳು ಸಂಸ್ಕೃತಿ ನೃತ್ಯ, ಚೆನ್ನೆಮಣೆ ಸ್ಪರ್ಧೆ, ಹಾಡು, ನೃತ್ಯ ಕಾರ್ಯಕ್ರಮಗಳು ಜರುಗಿದವು.
ಸಮೃದ್ಧಿ ಪ್ರಾರ್ಥಿಸಿದರು. ಆಮಂತ್ರಣ ಸೇವಾ ಪ್ರತಿಷ್ಠಾನ ಅಧ್ಯಕ್ಷ ವಿಜಯ ಕುಮಾರ್ ಜೈನ್ ಪ್ರಸ್ತಾವಿಸಿ ಸ್ವಾಗತಿಸಿದರು. ಟ್ರಸ್ಟಿ ಸದಾನಂದ ಬಿ.ಕುದ್ಯಾಡಿ ಸಹಕರಿಸಿದರು. ಹೆಚ್ಚೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಅರುಣ್ ಅರುವ ಧನ್ಯವಾದ ಸಲ್ಲಿಸಿದರು.