
ಕೊಕ್ಕಡ: ಶ್ರೀರಾಮ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗದ ಕುರಿತಾಗಿ ಪೂರ್ವಭಾವಿ ಸಭೆ ಶಕ್ತಿ ಕೇಂದ್ರ ಪ್ರಮುಖ ಪ್ರಶಾಂತ್ ಪುವಾಜೆ ಅದ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಮಂಡಲ ಪ್ರಭಾರಿ, ಮಹಾಶಕ್ತಿ ಕೇಂದ್ರ ಧರ್ಮಸ್ಥಳ ಪ್ರಧಾನ ಕಾರ್ಯದರ್ಶಿ ಗಣೇಶ್ ಹೊಸ್ತೋಟ, ಕೊಕ್ಕಡ ಪಂಚಾಯತ್ ಅಧ್ಯಕ್ಷೆ ಬೇಬಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಬೆಳ್ತಂಗಡಿ ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಳಂಬಿಲ ಮಾತನಾಡಿದರು. ಬೂತ್ ಅಧ್ಯಕ್ಷ, ಕಾರ್ಯದರ್ಶಿಗಳು, ಮಂಡಲ ಸ್ತರದ ಪ್ರಮುಖರು, ಹಿರಿಯ ಕಾರ್ಯಕರ್ತರು, ಪಂಚಾಯತ್ ಸದಸ್ಯರು, ಮಾಜಿ ಸದಸ್ಯರು, ಸಿ.ಎ ಬ್ಯಾಂಕ್ ನಿರ್ದೇಶಕರು, ಮಾಜಿ ಶಕ್ತಿ ಕೇಂದ್ರ ಪ್ರಮುಖರು, ಬೂತು ಅಧ್ಯಕ್ಷ, ಕಾರ್ಯದರ್ಶಿ ಗಳು ಉಪಸ್ಥಿತರಿದ್ದರು. ಮಂಡಲ ಎಸ್. ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ ಕುರ್ಲೆ ಸ್ವಾಗತಿಸಿದರು.