
ಉಜಿರೆ: ಪೇಟೆಯ ಪ್ರಮುಖ ವಹಿವಾಟು ರಸ್ತೆಯಲ್ಲಿರುವ ಹೋಟೆಲ್‌ವೊಂದರ ಮುಂಭಾಗ ಆ.3ರಂದು ಕಾರೊಂದು ನಿಯಂತ್ರಣ ತಪ್ಪಿ ತಡೆಗೋಡೆ ದಾಟಿ ಒಳಗೆ ನುಗ್ಗಿದ ಘಟನೆ ನಡೆದಿದೆ.
ಅದೃಷ್ಟವಶಾತ್ ಕಾರು ತಡೆಗೋಡೆಯಲ್ಲಿ ಸಿಕ್ಕಿಹಾಕಿಕೊಂಡು ನಿಂತ ಕಾರಣ, ಭಾರಿ ಅನಾಹುತ ಸಂಭವಿಸುವುದು ತಪ್ಪಿದೆ. ಘಟನೆ ನಡೆದ ಸಂದರ್ಭ ರಸ್ತೆಯಲ್ಲಿ ಹಾಗೂ ಹೋಟೆಲ್‌ನ ಮುಂಭಾಗ ಜನಜಂಗುಳಿಯಿದ್ದರೂ ಕೂಡ ಯಾರಿಗೂ ಗಾಯಗಳಾಗದಿರುವುದು ಆಶ್ಚರ್ಯವಾಗಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.