ವಿವಾದದ ಬಿಸಿಯೇರಿಸಿದ ಕಪಟ ಸನ್ಯಾಸಿ-ಕೃಷ್ಣ ಸಂವಾದ! ಜ ತಾಳಮದ್ದಳೆಯಲ್ಲಿ ಪಾತ್ರ ಮಾತನಾಡಿದ್ದೋ, ಪಾತ್ರಧಾರಿಯೋ? ಜ ಪರ-ವಿರೋಧದ ಬಿರುಸಿನ ಚರ್ಚೆ, ಕ್ಷಮಾಪಣೆ

0

ಯಕ್ಷಗಾನ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದ ಎಡನೀರು ಶ್ರೀಗೋಪಾಲಕೃಷ ಮಠದಲ್ಲಿ ಸ್ವಾಮೀಜಿಗಳ ಚಾತುರ್ಮಾಸ್ಯ ಸಂದರ್ಭ ಆಯೋಜಿಸಲಾಗಿದ್ದ ಯಕ್ಷಗಾನ ದಶಾಹದಲ್ಲಿ ಜು.೧೯ರಂದು ನಡೆದ ಸುಭದ್ರಾ ಕಲ್ಯಾಣದಲ್ಲಿ ಕಪಟ ಸನ್ಯಾಸಿಯಾಗಿದ್ದ ಅರ್ಜುನ ಮತ್ತು ಭಾವ ಕೃಷನ ನಡುವೆ ನಡೆದ ಸಂವಾದದಲ್ಲಿ ಕೆಲವೊಂದು ಶಬ್ದಗಳಿಗೆ ಕಲ್ಪಿಸಲಾದ ಭಾವಾರ್ಥವು ಮಠ ಪರಂಪರೆಯ ಕಡು ಭಕ್ತರಿಗೆ ಕಸಿವಿಸಿ ಉಂಟು ಮಾಡಿದೆ.
ಈ ಹಿನ್ನೆಲೆಯಲ್ಲಿ ಜು.೨೪ರಂದು ನಡೆದ ದಶಾಹ ಕಾರ್ಯಕ್ರಮದಲ್ಲಿ ಕಲಾವಿದ ಹಿರಣ್ಯ ವೆಂಕಟೇಶ ಭಟ್ಟರು ತಾನು ಹೇಳಿದ್ದು ಸರಿಯೇ ಇದೆ, ಬೇಸರವಾಗಿದ್ದರೆ ಕ್ಷಮಿಸಿ ಎಂಬ ಅರ್ಥದಲ್ಲಿ ಕ್ಷಮೆ ಯಾಚಿಸಿದ್ದಾರೆ. ವಿವಾದಿತ ಎಂದು ಹೇಳಲಾಗಿರುವ ಕ್ಲಿಪ್ಪನ್ನು ಬಾಯಾರು ಭಟ್ಟರು ಕ್ಯಾಪ್ಶನ್ ಕೊಟ್ಟು ಜಾಲತಾಣದಲ್ಲಿ ಬಿಟ್ಟರು.

ಆಗ ಯಾರಿಗೂ ಇದು ವಿವಾದವಾಗಲಿದೆ ಎಂದು ಗೊತ್ತಿರಲಿಲ್ಲ. ಎಡನೀರು ಸ್ವಾಮೀಜಿಗಳೂ ನೋಡಿ ಚೆನ್ನಾಗಿದೆ ಅಂದಿದ್ದರು. ಯಾವಾಗ ಈ ಸಂವಾದ ವಿವಾದದ ರೂಪ ತಳೆಯಿತೋ, ಯಕ್ಷಗಾನ ತಾಳಮದ್ದಲೆ ಪ್ರೇಮಿಗಳಲ್ಲದ ಭಕ್ತರ ನಡುವೆ ಸಂಚರಿಸಿತೋ, ಆಗ ವಿವಾದದ ಬಿಸಿ ಏರಿ ಕೊನೆಗೆ ತಣಿಸಲು ಜು.೨೪ರಂದು ಕ್ಷಮಾಪಣೆ ಕೇಳಿಸಲಾಯಿತು.
ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಕೇಳಿ ಬಂದು ಕ್ಷಮಾಪಣೆಗೆ ಒತ್ತಡ ಬಂದಿತ್ತು. ಚಾತುರ್ಮಾಸ್ಯ ಸಂದರ್ಭವೇ ಆದ್ದರಿಂದ ಅದಕ್ಕೆ ಬಲ ಬಂದಿತ್ತು. ಶಂಕರ ಪೀಠದ ಪರಪರೆಯ ಯತಿಗಳನ್ನು ಹಾಗೂ ಚಾತುರ್ಮಾಸ್ಯವನ್ನು ಅವಹೇಳನ ಮಾಡಿದ್ದಾರೆ ಎಂಬ ಆಕ್ಷೇಪಗಳು ಹರಿದಾಡಿತ್ತು.

ಪ್ರಚಲಿತದಲ್ಲಿರುವ ಹಿರಿಯ, ಪ್ರಬುದ್ಧ ಅರ್ಥಧಾರಿ ಅಶೋಕ್ ಭಟ್ ಉಜಿರೆ ಕಪಟ ಸನ್ಯಾಸಿ ಪಾತ್ರದಲ್ಲಿ, ವಿದ್ವಾಂಸ ಹಿರಣ್ಯ ವೆಂಕಟೇಶ್ ಭಟ್ ಶ್ರೀಕೃಷನ ಪಾತ್ರದಲ್ಲಿ ಸಂವಾದವನ್ನೇ ಮಾಡಿದ್ದಾರೆ. ಮೊದಲನೇ ಸಲ ಅರ್ಥ ಕೇಳುವಾಗ ಕ್ಷಮಾಪಣೆ ಯಾವ ವಿಚಾರಕ್ಕೆ ಕೇಳಬೇಕು ಎನ್ನುವ ಸಂಶಯ ಸಾಮಾನ್ಯ ಯಕ್ಷಗಾನ ಪ್ರೇಮಿಗೆ ಬರುತ್ತದೆ.
ಆದರೆ ಶಂಕರಮಠ, ರಾಮಚಂದ್ರಾಪುರ ಮಠದ ಭಕ್ತರಿಗೆ ಅದರಲ್ಲಿಯೂ ಯಕ್ಷಗಾನ ತಾಳಮದ್ದಲೆ ಪ್ರೇಮಿಗಳಲ್ಲದ ಮಠದ ಭಕ್ತರಿಗೆ ನೋವಾಗಬಹುದಾದ ವಿಚಾರಗಳು ಗಮನವಿಟ್ಟು ಕೇಳಿದಾಗ ಸಿಗುತ್ತವೆ. ಪ್ರಕರಣ ನೆನಪಿಸಿಕೊಂಡೋ, ಕಲ್ಪಿಸಿಕೊಂಡೋ ಈ ಕಾರಣಕ್ಕೆ ವ್ಯಂಗ್ಯ ಮಾಡಿರಬಹುದೋ ಎಂಬ ಸಂಶಯದಿಂದ ವಿಚಾರಕ್ಕೆ ವಿವಾದದ ಕಿಡಿ ತಗುಲಿರಬಹುದು.

ಯಕ್ಷಗಾನದ ಪೋಷಕ ಶ್ಯಾಮ್ ಭಟ್ಟರು ಈ ಯಕ್ಷಗಾನ ಆಯೋಜನೆ ಹಿಂದೆ ಇದ್ದಾರೆ ಎನ್ನುವ ಕಾರಣಕ್ಕೂ ವಿವಾದ ಆಗಿರಬಹುದು. ವೇದಿಕೆಯಲ್ಲಿದ್ದ ಕಲಾವಿದರಿಬ್ಬರೂ ಪ್ರಸಿದ್ಧರೇ ಆಗಿದ್ದರೂ, ಹಿಂದೆಯೂ ವಿವಾದ ಅವರಿಗೇನು ಹೊಸತಲ್ಲ. ಹೀಗಾಗಿ ಅವರಿಗೆ ಆಗದವರು ಅದನ್ನು ಮೇಲೆಬ್ಬಿಸಿರಬಹುದು.
ಆದರೆ ತಟಸ್ಥ ವ್ಯಕ್ತಿಯಾಗಿ ಮತ್ತು ಯಕ್ಷಗಾನ ಪ್ರೇಮಿಯಾಗಿ ನನಗೆ ಅನಿಸಿದಂತೆ ಇದೊಂದು ವಿವಾದವೇ ಅಲ್ಲ! ವಿಶೇಷ ಎಂದರೆ ಕ್ಷಮೆ ಯಾಚಿಸಿದ ಬಳಿಕವೇ ಇದು ಸಾವಿರದಿಂದ ಲಕ್ಷ ಜನಕ್ಕೆ ಗೊತ್ತಾಗಿದ್ದು. ಮಠದವರಿಗೆ ಟಾಂಟ್ ಕೊಟ್ಟಿರಬಹುದು, ಈ ಪೀಠಾಧಿಪತಿಗಳಿಗೆ ಹೇಳಿರಬಹುದು ಎಂಬ ಚರ್ಚೆ ನಡೆದು ಮತ್ತಷ ಹಾಳಾಗಿದ್ದೇ ಹೆಚ್ಚು.

ಸಂವಾದದಲ್ಲಿ ಹಿರಣ್ಯ ವೆಂಕಟೇಶ ಭಟ್ಟರು, ತಾನು ರಾಮ ಮಠದವ ಅಂದರೆ ಬಲರಾಮ ಮಠದವನು ಎಂದದ್ದು. ಪೂರಕವಾಗಿ ಪರಮ ಹಂಸ ಇತ್ಯಾದಿ ರಾಮ ಮಠ, ಶಂಕರಮಠ ಪರಂಪರೆಯ ಬಹುಪರಾಕ್‌ಗಳನ್ನು ಉಲ್ಲೇಖಿಸಿದ್ದು ವಿವಾದಕ್ಕೆ ಪ್ರಮುಖ ಕಾರಣ. ಯಕ್ಷಗಾನಲೈವ್''ನಲ್ಲಿ ಈ ಸಂವಾದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಸುಭದ್ರಾ ಕಲ್ಯಾಣದಲ್ಲಿ ಕಪಟ ಸನ್ಯಾಸಿ ಅರ್ಜುನ, ಕೃಷನ ಅರಮನೆಯಲ್ಲಿ ವೃತಾಚರಣೆ ಮಾಡಲು ಹೋಗುವಾಗ ಪ್ರಸಂಗದಲ್ಲಿ ಸನ್ಯಾಸಿಗಳ ಕಪಟತನದ ವಿಡಂಬನೆ ಬರಲೇಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಸನ್ಯಾಸಿಗಳ ಹೆಸರಲ್ಲಿ ನಕಲಿಗಳು ಮಾಡುವ ವಂಚನೆ, ಕೊಲೆ ಅನಾಚಾರಗಳು ಬೇಕಾದಷ್ಟು ವರದಿಯಾಗುತ್ತಿವೆ. ಈ ಕುರಿತು ಜಾಗೃತಿ ಮೂಡಿಸಬಹುದು. ಇದು ಪ್ರಜ್ಞಾವಂತರ ಕರ್ತವ್ಯವೂ ಹೌದು. ಹಾಗಂತ, ಸಮಾಜಮುಖಿ ಕೆಲಸ ಮಾಡುತ್ತಿರುವ ಹಲವು ಮಠಗಳಿದ್ದು, ಅನೇಕ ಸ್ವಾಮೀಜಿಗಳು ಜನಸಮೂಹಕ್ಕೆ ಸ್ಪೂರ್ತಿ ತುಂಬುವಂತಹ ಕೆಲಸವನ್ನೂ ಮಾಡುತ್ತಿದ್ದಾರೆ. ಸಜ್ಜನ ಮಠ ಪರಂಪರೆಯನ್ನು ಗೌರವಿಸುವುದು, ಸಮುದಾಯಕ್ಕೆ ನೋವಾಗದಂತೆ ನಡೆಸುವುದೂ ಅಗತ್ಯ. ಏನು ವಿವಾದದ ಸಂವಾದ: ಚಾತುರ್ಮಾಸ್ಯ ಮಾಡಿದರೆ ಏನಾದರೂ ಸಂಪಾದನೆ ಆಗಬೇಕಲ್ಲವೇ, ಚಾತುರ್ಮಾಸ್ಯಕ್ಕೆ ಬಂದರೆ ನಮಗೆ ನ? ಇಲ್ಲ ಎಂದು ಅಶೋಕ ಭಟ್ಟರು ಹೇಳಿದ್ದರ ಹಿಂದೆಯೂ ಪಾತ್ರದ ಔಚಿತ್ಯ ಇದೆ. ಸುಭದ್ರೆಯ ಪಡೆದುಕೊಳ್ಳುವ ಲಾಭದ ಯೋಚನೆ, ಇನ್ನೊಂದು ಪಾತ್ರಧಾರಿಗೆ ಸಿಗುವ ಸಂಭಾವನೆ.. ಇದು ಪಾತ್ರೋಚಿತವಾಗಿಯೇ ಇದೆ. ಇಲ್ಲ, ಚಾತುರ್ಮ್ಯಾಸ್ಯ ವೃತಕ್ಕೆ ಅವಮಾನ ಎಂದು ಹೇಳಲಾಗುವುದಿಲ್ಲ. ಗೋಪಾಲಕೃ? ಮಠದ ಉಲ್ಲೇಖವೂ ಎಡನೀರು ಮಠದ ಕುರಿತಾಗಿ ಪರೋಕ್ಷವಾಗಿ ಹೇಳಿದ್ದು, ಅಲ್ಲಿ ಬಂದ ಗೋವು ಶಬ್ದ ಕೆಲವರಿಗೆ ಅಸಂಬದ್ಧ ಅನಿಸಬಹುದು.

ಆದರೆ ಎದುರುಗಡೆ ಸಂವಾದದಲ್ಲಿ ಕೃಷನೇ ಇರುವುದರಿಂದ ಇದೂ ಪಾತ್ರೋಚಿತವೇ. ನೀವು ಯಾವ ಮಠದ ಪರಂಪರೆಯವರು ಎಂದು ಅರ್ಜುನ ಕೃಷನಿಗೆ ಕೇಳುವಾಗ ಅಶೋಕವನ ಇತ್ಯಾದಿ ವರ್ಣನೆ ಶಬ್ದಗಳು ಪಾತ್ರಧಾರಿ ಅಶೋಕ ಭಟ್ಟರಿಗೂ ಅನ್ವಯಿಸುವ ಜತೆ ಗೋಕರ್ಣದ ಅಶೋಕೆಗೂ ಸಂಬಂಧ ಕಲ್ಪಿಸುವ ಸಾಧ್ಯತೆಗಳು ಇದ್ದ ಕಾರಣ ಅಸಮಾಧಾನಗಳು ಮೂಡಿರಬಹುದು. ಹಿರಣ್ಯ ಭಟ್ಟರು ಮುಂದುವರಿದು, ನಾನು ರಾಮ ಮಠದವ ಅಂದರೆ ಬಲರಾಮ ಮಠದವ ಎಂದು ಕೃಷ ಹೇಳುವುದೂ ಕೂಡಾ ಪಾತ್ರದ ಪರಿಧಿಯೊಳಗೆ ಸಮರ್ಥನೀಯವೇ. ಏಕೆಂದರೆ ರಾಮ ಅವತಾರದ ಬಳಿಕ ಕೃಷ್ಣಾವತಾರದ ಮೂಲ ರಾಮನೇ ಆಗಿರುವುದರಿಂದ, ಇನ್ನೊಂದು ಬಲರಾಮನಿಗೂ ರಾಮನೆಂದೇ ಕರೆಯವುದರಿಂದ ಬಲರಾಮನ ರಾಜ್ಯದಲ್ಲಿ ಕೃಷ ಇರುವುದರಿಂದ ಇದು ಪಾತ್ರದ ಔಚಿತ್ಯ ಮೀರಿಲ್ಲ ಎನ್ನುವುದು ಸ್ಪಷ. ಆದರೂ ಈ ಹಿಂದೆಯೂ ಶ್ಯಾಮ್ ಭಟ್ಟರ ಕೃಪಾಪೋಷಿತ ಕಲಾವಿದರು, ವಿರೋಧಿಗಳಿಗೆ ಟಾಂಟ್ ಕೊಡುವುದರಲ್ಲಿ ಎತ್ತಿದ ಕೈ ಎಂಬ ಮಾತೂ ಇರುವುದರಿಂದ ಮತ್ತು ಈ ಕ್ಲಿಪ್ಪಿಂಗ್‌ನ್ನು ಮಾತ್ರ ನೋಡಿದ ಮಠದ ಕೆಲವು ಭಕ್ತರು (ಅವರು ಯಕ್ಷಗಾನ ಕಡು ಪ್ರೇಮಿಗಳಲ್ಲ) ವಿವಾದ ಮಾಡಿದ್ದಾರೆ. ಹೀಗಾಗಿ ಹೇಳದೇ ಇದ್ದರೂ ಅಡ್ಡಿ ಇಲ್ಲ. ಆದರೆ ಅದು ಕಲಾವಿದನಿಗೆ ಬಿಟ್ಟ ವಿಚಾರ. ನಾನು ಹೇಳಿದ ವಿಚಾರ ಪ್ರಸಂಗದಲ್ಲಿಯೇ ಇದೆ. ಪಾತ್ರೋಚಿತವಾಗಿದೆ. ಆದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹಿರಣ್ಯ ವೆಂಕಟೇಶ ಭಟ್ಟರು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಕ್ಷಮೆಯೂ ಕೇಳಿ ಬಿಟ್ಟರು. ಅದೂ ಎಡನೀರು ಸ್ವಾಮೀಜಿಗಳು, ಶ್ಯಾಮ್ ಭಟ್ರು ಅದನ್ನು ಅಲ್ಲಿಗೆ ಮುಗಿಸಿಬಿಡಿ ಎಂದು ಸೂಚಿಸಿದ್ದಕ್ಕೆ

ಪಾತ್ರೋಚಿತ ಸಂವಾದ ಕಲಾವಿದನ ಸ್ವಾತಂತ್ರ್ಯ: ಅರ್ಥಧಾರಿಯು ಪದ್ಯಕ್ಕಷ್ಟೇ ಅರ್ಥ ಹೇಳುವುದಲ್ಲ. ಹಾಗಾದರೆ ಬಾಯಿ ಪಾಠ ಮಾಡಿ ಹೇಳಬಹುದು. ೪ ಶತಮಾನಗಳ ಇತಿಹಾಸ ಇರುವ ಈ ತಾಳಮದ್ದಲೆ ಪ್ರಸಂಗ ಕಲಾವಿದನ ಪ್ರೌಢಿಮೆಯಿಂದ ಕಾಲಕಾಲಕ್ಕೆ ನಿರೂಪಣೆ ಶೈಲಿಯಿಂದ ಪ್ರಸ್ತುತ ಕಾಲ ಘಟ್ಟದ ಪರೋಕ್ಷ ಉದಾಹರಣೆಗಳಿಂದ ತಾಜಾ ಪ್ರಸಂಗ ಅನಿಸುವಂತೆ ಮಾಡುತ್ತದೆ. ಹೀಗೆ ಮಾಡಿದರೆ ನಿಜವಾಗಿಯೂ ಅದು ಕಲಾವಿದನ ಗೆಲುವು. ಕೈ ಕಡಿಯಬೇಕು: ನಾನು ಎಳವೆಯಲ್ಲಿ ಉಡುಪಿ ಮಠದಲ್ಲಿ ಕಲಿಯುತ್ತಿರುವಾಗ ರಾಮದಾಸ ಸಾಮಗರು ತಾಳಮದ್ದಲೆಯಲ್ಲಿ ಅದೂ ರಥಬೀದಿಯಲ್ಲಿ ವೇದಿಕೆಯಲ್ಲಿ ಕುಳಿತುಕೊಂಡು,ಕೃಷ ಪೂಜೆ ಮಾಡುವವರ ಕೈ ಕಡಿಯಬೇಕು” ಎಂದು ಹೇಳಿದಾಗ ಬಾಲಕನಾಗಿದ್ದ ನಾನೂ ಅಚ್ಚರಿಗೊಂಡಿದ್ದೆ! ಪ್ರಸಂಗ ಯಾವುದೆಂದು ನೆನಪಿಲ್ಲ. ಬಹುಷಃ ಅದೂ ಪಾತ್ರೋಚಿತವಾಗಿಯೇ ಇತ್ತು ಎನ್ನುವುದು ಖಚಿತ. ಆಗ ಮಠದ ಸ್ವಾಮಿಗಳ ಬುಲಾವ್ ಬಂದಿರಲಿಲ್ಲ ಎನ್ನುವುದು ಉಲ್ಲೇಖಾರ್ಹ.

ಕೇಶವ ! ಮಲ್ಪೆ ರಾಮದಾಸ ಸಾಮಗರು ಮತ್ತು ಬರೇ ಕೇಶವ ಭಟ್ಟರ ಸಂವಾದ ಇದಕ್ಕೆ ಉದಾಹರಣೆ. ತಾಳಮದ್ದಲೆಯಲ್ಲಿ ಮಂಗಗಳು ಎಲ್ಲವೂ ರಾಮದಾಸರೋ ಅಥವಾ ರಾಮದಾಸರೆಲ್ಲ ಮಂಗಗಳೋ ಎಂದು ಛೇಡಿಸಿದ್ದರು. ಆಗ ಎಲ್ಲರೂ ರಾಮದಾಸರನ್ನು ನೋಡಿ ನಕ್ಕಿದ್ದರು. ಆದರೆ ರಾಮದಾಸರು ತನ್ನ ಸರದಿ ಬಂದಾಗ ಯಾ ಕೇ ಶವ ದಂತೆ ಕುಳಿತಿದ್ದೆ ಎಂದು ಘರ್ಜಿಸಿದಾಗ, ಕೇಶವ ಭಟ್ಟರನ್ನು ನೋಡಿ ಕಲಾಭಿಮಾನಿಗಳು ನಕ್ಕಿದ್ದರು!

ಯಕ್ಷಗಾನಕ್ಕೆ ಇದೆಲ್ಲವೂ ಬೇಕು. ಕಲಾವಿದರನ್ನು ಸದಾ ಟೀಕಿಸುತ್ತಲೇ ಇರಬಾರದು. ಈಗಂತೂ ಜಾಲತಾಣದಲ್ಲಿ ವಯಸ್ಸು, ಹಿರಿತನ, ಗೌರವ ನೋಡದೆ ಲೈವ್‌ನಲ್ಲಿಯೇ ತೀರಾ ಕೆಟ್ಟದಾಗಿ ಟೀಕಿಸುವ ವರ್ಗ ಒಂದಿದೆ. ಇನ್ನೊಂದು, ಕಲಾವಿದರು ಅಸಂಬದ್ಧ ಮಾಡಿದಾಗ, ವೈಯಕ್ತಿಕ ಬದುಕಲ್ಲಿ ಅಪರಾಧಗಳನ್ನು ಮಾಡಿದಾಗಲೂ ಅವರನ್ನು ಮೆಚ್ಚಿಸಲು ಬೆಂಬಲಿಸಿ, ಹಣ, ವಕೀಲರನ್ನು ಕೊಟ್ಟು ಸಾಕುವವರೂ ಹೆಚ್ಚುತ್ತಿದ್ದಾರೆ. ಇವೆರಡೂ ಅತಿರೇಕಗಳು ಸಲ್ಲದು. ನಮಗೆ ಯಕ್ಷಗಾನಂ ಗೆಲ್ಗೆ ಅಷ್ಟೇ.

LEAVE A REPLY

Please enter your comment!
Please enter your name here