
ಕಾಂತಾರ ಸಿನಿಮಾ ನಂತರ ಇಡೀ ಚಿತ್ರರಂಗವನ್ನೇ ಧೂಳೆಬ್ಬಿಸುತ್ತಿರುವ ಸಿನಿಮಾವೆಂದರೆ ಸು ಫ್ರಂ ಸೋ'. ಸಿನಿಮಾ ನೋಡುವ ಮುನ್ನವೇ ಇದರ ಹೆಸರೇ ಜನರನ್ನು ಹುಚ್ಚೆಬ್ಬುವಂತೆ ಮಾಡಿತ್ತು. ಸಿನಿಮಾ ಬಿಡುಗಡೆಯಾದ ನಂತರವಂತೂ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡಿದ್ದಾರೆ. ಇಷ ದಿನಗಳ ಕಾಲ ಕೌಂಟುಂಬಿಕ ಸಿನಿಮಾದ ಕೊರತೆ ಹಾಗೂ ಕೇವಲ ಮಚ್ಚು ಲಾಂಗು ಶೂಟ್ ಇಂತಹ ಕಥೆಗಳಿಂದ ರೋಸಿ ಹೋಗಿದ್ದ ಸಿನಿ ಪ್ರಿಯರಿಗೆ
ಸುಲೋಚನ ಫ್ರಂ ಸೋಮೇಶ್ವರ’ ವಿಭಿನ್ನ ರೀತಿಯ ಅನುಭವ ನೀಡುತ್ತಿದೆ.
ಕಳೆದ ಶುಕ್ರವಾರ ಬಿಡುಗಡೆಗೊಂಡ ಸಿನಿಮಾ ಸುನಾಮಿ ರೀತಿ ಭೋರ್ಗರೆಯುತ್ತಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ವೇಗದಲ್ಲಿ ಮುನ್ನುಗ್ಗುತ್ತಿದೆ.
ಸಿನಿಮಾದ ಗಳಿಕೆ ೩-೩.೫ ಕೋಟಿ ರೂಪಾಯಿ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ SACNILK ವರದಿ ಮಾಡಿದೆ. ಈ ಮೂಲಕ ಚಿತ್ರದ ಕರ್ನಾಟಕದ ಕಲೆಕ್ಷನ್ ಸುಮಾರು ೧೩ ಕೋಟಿ ರೂಪಾಯಿ ಆಗಿದೆ. ದಿನ ಕಳೆದಂತೆ ಶೋಗಳ ಸಂಖ್ಯೆ ಹೆಚ್ಚುತ್ತಿದ್ದು, ವಾರದ ದಿನವೂ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಈ ಮಧ್ಯೆ ಟಿಕೆಟ್‌ಗಾಗಿ ಕರ್ನಾಟಕದ ಸಿನಿ ಪ್ರಿಯರು ಮುಗಿ ಬೀಳುತ್ತಿದ್ದು, ಟಿಕೆಟ್ ಸಿಗದೆ ಹತಾಶರಾಗುತ್ತಿದ್ದಾರೆ.
ಖ್ಯಾತ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಅವರ ಚೊಚ್ಚಲ ನಿರ್ಮಾಣದ ಚಿತ್ರ ಇದಾಗಿದ್ದು, ಈ ಮೂಲಕ ಶಶಿಧರ್ ಶೆಟ್ಟಿಯವರು ಉದ್ಯಮಿಯ ಜೊತೆ ನಿರ್ಮಾಪಕರಾಗಿಯೂ ಹೊರ ಹೊಮ್ಮಿದ್ದಾರೆ. ಅಣ್ಣಪ್ಪ, ಸರಕಾರಿ ಹಿರಿಯ ಫ್ರೌಡಶಾಲೆ, ಗರುಡಗಮನ, ಟೋಬಿ ಚಿತ್ರಗಳನ್ನು ನಿರ್ಮಿಸಿ ಮೋಡಿ ಮಾಡಿದ್ದ ಕಳಸ ರವಿ ರೈ ಹಾಗೂ ಒಂದು ಮೊಟ್ಟೆಯ ಕಥೆಯ ಮೂಲಕ ಜನರನ್ನು ರಂಜಿಸಿ ನಂತರ ಸಾಲು ಸಾಲು ೧೮ ಸಿನಿಮಾಗಳಲ್ಲಿ ನಟಿಸಿದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ಮಾಣದಲ್ಲಿ, ಲೈಟರ್ ಬುದ್ಧ' ಬ್ಯಾನರ್ ಅಡಿ ಸಿನಿಮಾ ಮೂಡಿ ಬಂದಿದೆ. ಒಂದು ವಠಾರದ ಕಥೆ, ಅದರಲ್ಲಿ ಸತತ ೨ ಗಂಟೆಯಷ ನಕ್ಕು ನಗಿಸುವ ಹಾಸ್ಯಭರಿತ ಕಥೆ, ಕೊನೆಯಲ್ಲಿ ಪ್ರೇಕ್ಷಕರನ್ನು ಭಾವನೆಯ ಗಡಲಲ್ಲಿ ತೇಲಿಸುವ ಭಾವನಾತ್ಮಕ ಕ್ಲೈಮಾಕ್ಸ್... ಮರ್ಲೂರು ಎನ್ನುವ ಊರು, ಅದರಲ್ಲಿಯ ರವಿಯಣ್ಣ, ಅಶೋಕ, ಸುಲೋಚನಳ ಆಟ, ಕರುಣಾಕರ ಗುರೂಜಿಯ ಎಂಟ್ರಿ ಪ್ರತಿ ಪಾತ್ರವೂ ಸಿನಿಮಾದಲ್ಲಿ ಹೇಳಿ ಮಾಡಿಸಿದಂತಿದೆ. ನಟನೆಯಲ್ಲಿ
ರವಿಯಣ್ಣ’ನಾಗಿ ಶನೀಲ್ ಗೌತಮ್, ಸ್ವಾತಿ ಮುತ್ತಿನ ಮಳೆ ಹನಿಯೇ' ಹಾಗೂ
ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ತಮ್ಮ ನಟಿಸಿದ್ದ ಜೆ.ಪಿ. ತೂಮಿನಾಡು ಈ ಸಿನಿಮಾದಲ್ಲೂ ನಿರ್ದೇಶನದ ಜೊತೆ ನಟಸಿ ಸಿನಿ ರಸಿಕರನ್ನು ರಂಜಿಸಿದ್ದಾರೆ. ಭಾವ'ನಾಗಿ ಪುಷರಾಜ್ ಬೋಳಾರ್,
ಚಂದ್ರ’ನಾಗಿ ಪ್ರಕಾಶ್ ತೂಮಿನಾಡು, ಸತೀಶ'ನಾಗಿ ದೀಪಕ್ ರೈ ಪಾಣಾಜೆ,
ಯದು’ವಾಗಿ ಮೈಮ್ ರಾಮದಾಸ್, `ಭಾನು’ವಾಗಿ ನಟಿ ಸಂಧ್ಯಾ ಅರೆಕೆರೆ ಅಭಿನಯ ವರ್ಣಿಸಲಸಾಧ್ಯ.
ಸುಲೋಚನ ಫ್ರಂ ಸೋಮೇಶ್ವರದ ಬಹುತೇಕ ಚಿತ್ರೀಕರಣ ಬೆಳ್ತಂಗಡಿ, ವೇಣೂರು ಸುತ್ತ ಮುತ್ತ ನಡೆದಿದೆ. ಬಹುತೇಕ ಹೊಸ ತಂಡವೇ ಸೇರಿ ಮಾಡಿರುವ ಸಿನಿಮಾ ಇದಾಗಿದ್ದು, ಸಿನಿ ಪ್ರಿಯರಿಗೆ ಹೊಸ ಅನುಭವವನ್ನೇ ನೀಡಿದೆ. ಒಟ್ಟಿನಲ್ಲಿ ಶೆಟ್ರುಗಳು ಬಂದು ಕನ್ನಡ ಸಿನಿಮಾ ರಂಗವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಾರೆ ಎನ್ನುವುದನ್ನು ಬರೋಡ, ರವಿ ರೈ, ರಾಜ್ ಬಿ ಶೆಟ್ಟಿ ಮತ್ತೆ ಸಾಬೀತುಪಡಿಸಿದ್ದಾರೆ.